ಶ್ರೀನಿವಾಸಪುರ (www.vknews.in): ತಾಲ್ಲೂಕಿನ ಗಂಗನ್ನಗಾರಿಪಲ್ಲಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕ ಸಹಕಾರ ಸಂಘವನ್ನು ಸಂಘದ ಅಧ್ಯಕ್ಷರಾದ ಗೋವಿಂದಸ್ವಾಮಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ ಕಚೇರಿ ಉಪವ್ಯವಸ್ಥಾಪಕ ಕೆ.ಎಂ. ಮುನಿರಾಜು, ವಿಸ್ತರಣಾಧಿಕಾರಿ ಎನ್. ಶಂಕರ್, ಗೋಪಾಲಕೃಷ್ಣ ಸೇರಿದಂತೆ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದು, ಸಂಘದ ಮೂಲಕ ಹಾಲು ಉತ್ಪಾದಕರಿಗೆ ಸೌಲಭ್ಯಗಳನ್ನು ಒದಗಿಸಲು ಬದ್ಧತೆಯನ್ನು ವ್ಯಕ್ತಪಡಿಸಿದರು. ಗ್ರಾಮಸ್ಥರು ಸಹಕಾರ ಸಂಘದ ಸ್ಥಾಪನೆಯಿಂದ ಹಾಲು ಉತ್ಪಾದಕರಿಗೆ ನೇರ ಲಾಭ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.