ಕೋಲಾರ (www.vknews.in): ಇಂದು ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಅವರನ್ನು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಸಂಘದ ರಾಜ್ಯಾಧ್ಯಕ್ಷ ಡಾ. ನೂರ್ ಅಹಮದ್ ಅವರ ನೇತೃತ್ವದಲ್ಲಿ ಸಂಘದ ಮುಖಂಡರು ಭೇಟಿ ಮಾಡಿ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಚರ್ಚಿಸಿದರು. ಸೇವಾ ಭದ್ರತೆ ಒದಗಿಸಿ, ವರ್ಷದ ೧೨ ತಿಂಗಳು ವೇತನ ನೀಡಬೇಕು, ಯುಜಿಸಿ ಅರ್ಹತೆ ಪಡೆಯಲು ಐದು ವರ್ಷಗಳ ಕಾಲ ಅವಕಾಶ ಕೊಡಬೇಕು, ಹಿರಿಯ ಉಪನ್ಯಾಸಕರನ್ನು ಕೌನ್ಸಿಲಿಂಗ್ ಮಾಡದೆ ಮುಂದುವರಿಸಬೇಕು ಹಾಗೂ ೧೬ ವರ್ಷದ ಹಿರಿತನದ ಲಿಮಿಟೇಷನ್ ತಿದ್ದುಪಡಿ ಮಾಡಿ ಅತಿಥಿ ಉಪನ್ಯಾಸಕರಾಗಿ ಮಾಡಿದಷ್ಟು ವರ್ಷದ ಅಂಕಗಳನ್ನು ನೀಡಬೇಕೆಂದು ಒತ್ತಾಯಿಸಲಾಯಿತು.
ಮನವಿಯನ್ನು ಸ್ವೀಕರಿಸಿದ ಸಚಿವರು, ಕೆಲವು ಯುಜಿಸಿ ಮತ್ತು ನಾನ್-ಯುಜಿಸಿ ಪ್ರಕರಣಗಳು ಕೋರ್ಟ್ನಲ್ಲಿರುವುದರಿಂದ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಶೀಘ್ರವೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಮೌಖಿಕವಾಗಿ ಭರವಸೆ ನೀಡಿದರು.ಅದೇ ರೀತಿ ನಿವೃತ್ತಿ ಅಥವಾ ಸೇವೆಯಲ್ಲಿ ಮರಣ ಹೊಂದಿದವರ ಕುಟುಂಬಕ್ಕೆ ₹೫ ಲಕ್ಷ ಪರಿಹಾರ ನೀಡುವ ವ್ಯವಸ್ಥೆ ಮಾಡಿಕೊಟ್ಟಿರುವುದಕ್ಕಾಗಿ ಸಚಿವರಿಗೆ ಸಂಘದ ಮುಖಂಡರು ಧನ್ಯವಾದ ಹೇಳಿದರು. ಈ ಸಂದರ್ಭದಲ್ಲಿ ಸಂಘದ ಮುಖಂಡರು ಮಣಿ, ಶಾಬಾಸ್, ರವೀಂದ್ರ, ರಮಾನಂದ, ಬಾಲಾಜಿ ಮತ್ತು ಸಂದೀಪ್ ಉಪಸ್ಥಿತರಿದ್ದರು. ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.