ಮುರ್ಷಿದಾಬಾದ್ (www.vknews.in) : ಯಾರೇ ವಿರೋಧಿಸಿದರೂ ಮುಂದಿನ ಎರಡು ವರ್ಷಗಳ ಒಳಗೆ ಪಶ್ಚಿಮ ಬಂಗಾಳದಲ್ಲಿ ಬಾಬರಿ ಮಸೀದಿ ರಚನೆ ಪೂರ್ಣಗೊಳ್ಳುತ್ತದೆ ಎಂದು ಜನ್ ಉನ್ನಯನ್ ಪಕ್ಷದ ಸಂಸ್ಥಾಪಕ ಹುಮಾಯೂನ್ ಕಬೀರ್ ಹೇಳಿದ್ದಾರೆ.
ಎಎನ್ ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಹುಮಾಯೂನ್ “ನನಗೆ ತುಂಬಾ ಸಂತೋಷವಾಗಿದ್ದು, ನಾನು ಸರ್ವಶಕ್ತನಿಗೆ ಧನ್ಯವಾದ ಹೇಳುತ್ತೇನೆ. ಇಂದು ನನ್ನೊಂದಿಗೆ ಅನೇಕ ಜನರು ನಿಂತಿದ್ದಾರೆ, ಮತ್ತು ನಾನು ಅವರೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ಇತರರು ನನ್ನನ್ನು ವಿರೋಧಿಸಲಿ. ಮುಂದಿನ ಎರಡು ವರ್ಷಗಳಲ್ಲಿ, ಬಾಬರಿ ಮಸೀದಿ ರಚನೆ ಪೂರ್ಣಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
ದೇವಾಲಯಗಳನ್ನು ನಿರ್ಮಿಸುವುದು ಸರಿ, ಆದರೆ ಒಬ್ಬ ಮುಸ್ಲಿಂ ಮಸೀದಿ ನಿರ್ಮಿಸಲು ಬಯಸಿದರೆ, ಅವರು ಅದನ್ನು ವಿರೋಧಿಸುತ್ತಿದ್ದಾರೆ. ನಾವು ಅವರನ್ನು ಅಧಿಕಾರದಿಂದಲೇ ಹೊರಹಾಕುತ್ತೇವೆ” ಎಂದು ಹೇಳಿದ್ದಾರೆ.
ಕಳೆದ ವರ್ಷ ಡಿಸೆಂಬರ್ 6 ರಂದು ಹುಮಾಯೂನ್ ಕಬೀರ್ ಮುರ್ಷಿದಾಬಾದ್ನ ಬೆಲ್ದಂಗಾದಲ್ಲಿ ‘ಬಾಬರಿ ಮಸೀದಿ’ಗೆ ಅಡಿಪಾಯ ಹಾಕಿದ್ದರು. ಹಲವು ಹೇಳಿಕೆಗಳು ಬಳಿಕ ಬಾಬರಿ ಮಸೀದಿ ನಿರ್ಮಾಣಕ್ಕೆ ಮುಂದಾದ ಬಳಿಕ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಹುಮಾಯೂನ್ ಕಬೀರ್ ಅವರನ್ನು ಹೊರ ಹಾಕಲಾಗಿತ್ತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.