(www.vknews.in) : ಜುಳು ಜುಳು ಎಂದು ಹರಿಯುವ ನೇತ್ರಾವತಿ ನದಿಯ ದಡದಲ್ಲಿ, ಮರಗಿಡಗಳಿಂದ ತುಂಬಿ ತುಳುಕಿ, ಶಾಂತವಾಗಿ ಬೀಸುವ ತಂಗಾಳಿಯ ಮಧ್ಯೆ,ರಮಣೀಯವಾಗಿ ಕಂಗೊಳಿಸುವ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ತಲೆಯೆತ್ತಿ ನಿಂತ ಧಾರ್ಮಿಕ ಲೌಕಿಕ ಶಿಕ್ಷಣ ಸಮುಚ್ಚಯ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ದಶ ವರ್ಷಾಚರಣೆಯ ಸಂಭ್ರಮದಲ್ಲಿದೆ. ಹತ್ತು ವರ್ಷಗಳ ಹಿಂದೆ ನಚ್ಚಬೆಟ್ಟು ಎಂಬ ಹಳ್ಳಿಗಾಡು ಒಂದು ಊರು ಮಾತ್ರ ವಾಗಿತ್ತು. ಬಹುತೇಕರಿಗೆ ಆ ಊರಿನ ಹೆಸರೇ ಗೊತ್ತಿರಲಿಲ್ಲ. ಇಂದು ಆ ಊರು ಸುಜ್ಞಾನ ಪಸರಿಸುವ ಧಾರ್ಮಿಕ ಕೇಂದ್ರ ವಾಗಿ ಮಾರ್ಪಟ್ಟಿದೆ.
ನಚ್ಚಬೆಟ್ಟು ಎಂಬ ಕುಗ್ರಾಮವನ್ನು ಜ್ಞಾನ ನಗರಿಯಾಗಿ ಪರಿವರ್ತಿಸಿದ ಕ್ರಾಂತಿ ಪುರುಷರಾಗಿದ್ದಾರೆ ತೋಕೆ ಉಸ್ತಾದ್. ಉಸ್ತಾದರ ಪಾದ ಸ್ಪರ್ಶ ದಿಂದ ಅನುಗ್ರಹೀತ ಗೊಂಡ ನಚ್ಚಬೆಟ್ಟು ವಿನ ಮಣ್ಣು ಇಂದು ಐತಿಹಾಸಿಕ ಕ್ಷಣವನ್ನು ಸಾಕ್ಷಿಯಾಗಲು ಕಾದು ಕುಳಿತಿದೆ. ಜ್ಞಾನ ದಾಹಿಗಳಿಗೆ ಅರಿವಿನ ಸಿಂಚನ ನೀಡಿದ ಈ ಊರು ಸುಲ್ತಾನಿ ಮತ್ತು ಪುರ್ಖಾನಿಗಳಿಗೆ ಜನ್ಮ ನೀಡಿತು. ನೂರಾರು ಯುವ ವಿದ್ವಾಂಸರು ನಚ್ಚಬೆಟ್ಟಿವಿನ ಮಣ್ಣಿನಲ್ಲಿ ಸನದ್ ಪಡೆದು ದಅ್ವಾ ರಂಗಕ್ಕೆ ಕಾಲಿಟ್ಟರು. ಸುಲ್ತಾನುಲ್ ಉಲಮಾ, ಪೆರೋಡ್ ಉಸ್ತಾದ್, ಬಾಯಾರ್ ತಂಙಳ್, ಫಾರೂಖ್ ನಈಮಿ ಮುಂತಾದ ಅತಿರಥ ಮಹಾನುಭಾವರ ಪಾದಗಳ ಸ್ಪರ್ಶದಿಂದ ಪುನೀತಗೊಳ್ಳುವ ಭಾಗ್ಯ ಲಭಿಸಿದ ಮಣ್ಣಿದು.
ಕರ್ನಾಟಕದ ದಾರುಲ್ ಇರ್ಶಾದ್ ಖುತುಬ್ ಖಾನ ಹೊರತು ಪಡಿಸಿದರೆ ಅತ್ಯಂತ ಹೆಚ್ಚು ಗ್ರಂಥಗಳ ಸಂಗ್ರಹ ಇರುವ NM ಉಸ್ತಾದ್ ಖುತುಬ್ ಖಾನ ನಚ್ಚಬೆಟ್ಟು ವಿನಲ್ಲಿ ಕಾಣಬಹುದು. ಗ್ರಂಥಗಳ ಸಂಗ್ರಹದಿಂದಲೂ, ವಿದ್ವಾಂಸರ ಸೃಷ್ಟಿಯಿಂದಲೂ ನಚ್ಚಬೆಟ್ಟು ಅನುಗ್ರಹೀತ ಗೊಳ್ಳಲು ಕಾರಣ ರಾದವರು ಶೈಖುನಾ ತೋಕೆ ಉಸ್ತಾದರು.ಉಸ್ತಾದರ ಕಾಲ್ತುಳಿತ ಈ ಊರಿನ ದಿಸೆಯನ್ನೇ ಬದಲಿಸಿ ಬಿಟ್ಟಿತು.ಉಸ್ತಾದರ ಕನಸಿನ ಸಾಮ್ರಾಜ್ಯ ವಾದ ನಚ್ಚಬೆಟ್ಟು ದಾರುಲ್ ಮುಸ್ತಫಾ ಸಂಸ್ಥೆಗೆ ದಶ ವರ್ಷ ಪೂರ್ತಿಗೊಳ್ಳುವುದರೊಂದಿಗೆ, ದರ್ಸ್ ರಂಗದಲ್ಲಿ ತೊಡಗಿಸಿಕೊಂಡು ಇಪ್ಪತೈದು ಸಂವತ್ಸರಗಳು ಕಳೆಯುತ್ತಿದೆ.
ಈ ಸಮಾರಂಭ ವನ್ನು ಐತಿಹಾಸಿಕ ಗೊಳಿಸಲು ಅತ್ಯಮೂಲ್ಯ ಮೂರು ಅರಬೀ ಗ್ರಂಥಗಳ ಮೂಲಕ ಉಸ್ತಾದರು ಅಧಿಕೃತ ವಾಗಿ ಸಮಾವೇಶಕ್ಕೆ ಚಾಲನೆ ನೀಡಿದ್ದಾರೆ. ಗ್ರಂಥ ರಚನೆ ಯಲ್ಲಿ ಉಸ್ತಾದರ ಆವೇಶ ಮತ್ತು ಸಾಮರ್ಥ ಕಂಡ ಕುಂಬೋಳ್ ಸಾದಾತ್ ಕುಟುಂಬದ ಅಗ್ರಗಣ್ಯ ಸಾರಥಿ ಸಯ್ಯಿದ್ ಕುಂಬೋಳ್ ತಂಙಳ್ ರವರು ಖಲಮುಲ್ ಉಲಮಾ ಎಂದು ತೋಕೆ ಉಸ್ತಾದರನ್ನು ಕರೆಯಬಹುದು ಎಂದು ಅಭಿಮಾನ ಪಟ್ಟಿದ್ದಾರೆ. ದಾರುಲ್ ಮುಸ್ತಫಾ ಇದರ ಹತ್ತನೇ ವಾರ್ಷಿಕ ಸಮಾರಂಭ ಪೆಬ್ರವರಿ 13/14/15 ರಂದು ನಡೆಯಲಿದೆ. ಸುನ್ನತ್ ಜಮಾಅತ್ ಗಾಗಿ ಓಡಾಡುವ ಉಸ್ತಾದರ ಸಂಸ್ಥೆಯ ಸಮ್ಮೇಳನಕ್ಕೆ ಹೋಗುವಾಗ ಮೂಲಕ ನಾವೂ ಸಾಕ್ಷಿಗಳಾಗೋಣ.ಉಸ್ತಾದರು ಕಟ್ಟಿ ಬೆಳೆಸಿದ ಸಂಸ್ಥೆ ಮತ್ತು ಅದರ ಒಳಗಳನ್ನು ಕಂಡು ಆಸ್ವಾದಿಸೋಣ. ಬರುವಿರಿ ತಾನೇ….. ನಚ್ಚಬೆಟ್ಟಿವಿನ ಸೌಭಾಗ್ಯದ ಮಣ್ಣು ನಿಮ್ಮನ್ನು ಕರೆಯುತ್ತಿದೆ.
✍️ ಎಂ ಹೆಚ್ ಹಸನ್ ಝುಹ್ರಿ, ಮಂಗಳಪೇಟೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.