ದುಬೈ(www.vknews.in): ತಂದೆ ತನ್ನ ಏಕೈಕ ಮಗನನ್ನು ಕಾರು ಡಿಕ್ಕಿ ಹೊಡೆದ ಚಾಲಕನನ್ನು ‘ಕ್ಷಮಿಸಲು’ ನಿರ್ಧರಿಸಿದ ಅಪರೂಪದ ಘಟನೆಯೊಂದು ನಡೆದಿದೆ. ಕಳೆದ ವಾರ, ಶಾರ್ಜಾದ ಮುವೈಲಾ ಪ್ರದೇಶದಲ್ಲಿ ಮರಳಿನ ಪಾರ್ಕಿಂಗ್ ಸ್ಥಳದಲ್ಲಿ ಚಾಲಕನೊಬ್ಬ ಡಿಕ್ಕಿ ಹೊಡೆದಾಗ 2 ವರ್ಷದ ಅಲನ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದೊಂದು ಅನಿರೀಕ್ಷಿತ ಅಪಘಾತವಾಗಿದ್ದು, ಮಗು ತನ್ನ ತಾಯಿಯೊಂದಿಗೆ ಮನೆಯ ಹೊರಗೆ ಬಂದಾಗ ಆ ಸ್ಥಳದಲ್ಲಿ ಪಾರ್ಕಿಂಗ್ ಮಾಡಿದ್ದ ಕಾರೊಂದರ ಚಾಲಕ ಮಗುವನ್ನು ಗಮನಿಸದೆ ಹಠಾತ್ತನೆ ಕಾರನ್ನು ಹಿಂದಕ್ಕೆ ಚಲಾಯಿಸಿದನು. ಕಾರಿನ ಅಡಿಗೆ ಸಿಲುಕಿದ ಮಗು ಅಲನ್ ರೂಮಿ ಸ್ಥಳದಲ್ಲೇ ಮೃತಪಟ್ಟಿದ್ದನು. ಮಗುವನ್ನು ಶಾರ್ಜಾದ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ ಕುಟುಂಬವು ಭಾರತಕ್ಕೆ ವಾಪಾಸ್ಸಾಗಿತ್ತು. ಚಾಲಕನನ್ನು ಬಂಧಿಸಿದ್ದ ಪೊಲೀಸರು ಆತನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದರು. ಮೃತ ಮಗುವಿನ ಪೋಷಕರು ಹಾಗೂ ಚಾಲಕ ಕೇರಳ ಮೂಲದವರಾಗಿದ್ದರು. ಭಾರತಕ್ಕೆ ಮರಳಿದ ಕುಟುಂಬವು ಬಹಳ ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದು, ಚಾಲಕನ ಕ್ಷಮಾಪಣೆಗೆ ಮುಂದಾಗಿದೆ. ತಮ್ಮ ಮಗುವಿನ ಕಾರಣದಿಂದಾಗಿ ಒಂದು ಕುಟುಂಬವು ಬೀದಿಗೆ ಬರುವುದು ಬೇಡ ಎಂಬ ಕಾರಣದಿಂದ ಮೃತ ಮಗುವಿನ ಪೋಷಕರು ಚಾಲಕನಿಗೆ ಕ್ಷಮಿಸಲು ಮುಂದಾಗಿದ್ದಾರೆ.
2015 ರಲ್ಲಿ ನಿಧನರಾದ ಸಿರಿಯನ್ ಹುಡುಗ ಅಲನ್ ಕುರ್ದಿ ನೆನಪಿಗಾಗಿ ತಮ್ಮ ಮಗುವಿಗೆ ಅಲನ್ ರೂಮಿ ಎಂದು ನಾಮಕರಣ ಮಾಡಿದ್ದರು.
ಮದುವೆಯಾಗಿ ಸುಮಾರು 10 ವರ್ಷಗಳ ನಂತರ ತಮಗೆ ಜನಿಸಿದ ಗಂಡು ಮಗುವಿಗೆ ಅವರು ಅಲನ್ ಎಂದು ಹೆಸರಿಸಿದರು.
ಅಲನ್ ನಮ್ಮ ಜೀವನದ ಬೆಳಕಾಗಿದ್ದರು, ಆದರೆ ನಾವು ಅವನನ್ನು ಇಷ್ಟು ಬೇಗ ಕಳೆದುಕೊಳ್ಳುತ್ತೇವೆ ಎಂದು ಯೋಚಿಸಿರಲಿಲ್ಲ ಎಂದು ತಂದೆ ಕಣ್ಣೀರಿಡುತ್ತಾ ಹೇಳುತ್ತಾರೆ.
ಇದು ಯಾರ ತಪ್ಪೂ ಅಲ್ಲ. ಎಲ್ಲಾ ಕಡೆಯಿಂದ ಗಮನ ಕೊರತೆ ಇದ್ದ ದುರದೃಷ್ಟಕರ ಘಟನೆಯಾಗಿತ್ತು. ಚಾಲಕನನ್ನು ಶಿಕ್ಷಿಸುವುದರಿಂದ ನಮ್ಮ ಮಗ ಹಿಂತಿರುಗುವುದಿಲ್ಲ. ನಾವು ಈಗ ಚಾಲಕನ ಬಿಡುಗಡೆಗಾಗಿ ಆತನಿಗೆ ಕ್ಷಮಿಸಿದ್ದೇವೆ ಎನ್ನುತ್ತಾರೆ ಶರ್ಫುದ್ದೀನ್.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.