ಬೈರುತ್ (www.vknews.in) | ಲೆಬನಾನ್ ನ ಪೂರ್ವ ಬೆಕ್ಕಾ ಕಣಿವೆಯಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 24 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಅಧಿಕಾರಿಗಳು ಮತ್ತು ಭದ್ರತಾ ಮೂಲಗಳು ತಿಳಿಸಿವೆ.
ಹಿಜ್ಬುಲ್ಲಾದ “ಕಮಾಂಡ್ ಸೆಂಟರ್ಗಳನ್ನು” ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಹತ್ಯೆಗೀಡಾದವರಲ್ಲಿ ಹಿರಿಯ ಹಿಜ್ಬುಲ್ಲಾ ನಾಯಕ ಹುಸೇನ್ ಯಾಗಿ ಕೂಡ ಸೇರಿದ್ದಾರೆ. ಅವರು ಹಿಜ್ಬುಲ್ಲಾ ಮಾಜಿ ಸಂಸದ ಮೊಹಮ್ಮದ್ ಯಾಗಿ ಅವರ ಪುತ್ರ.
ಸ್ಥಳೀಯ ಮಾಧ್ಯಮಗಳು ಬಿಡುಗಡೆ ಮಾಡಿದ ತುಣುಕುಗಳು ಅಪಾರ್ಟ್ಮೆಂಟ್ ಕಟ್ಟಡದ ಮೇಲೆ ದಾಳಿ ನಡೆದಿದೆ ಎಂದು ಸೂಚಿಸಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದ ಅತ್ಯಂತ ಮಾರಣಾಂತಿಕ ದಾಳಿಗಳಲ್ಲಿ ಇದು ಒಂದಾಗಿದೆ.
ಈ ದಾಳಿಯು 2024 ರಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಯುಎಸ್ ಮಧ್ಯಸ್ಥಿಕೆಯ ಕದನ ವಿರಾಮ ಒಪ್ಪಂದವನ್ನು ಮತ್ತೊಮ್ಮೆ ಅಪಾಯಕ್ಕೆ ಸಿಲುಕಿಸಿದೆ. ದಾಳಿಗೆ ಸ್ವಲ್ಪ ಸಮಯದ ಮೊದಲು, ಇಸ್ರೇಲ್ ಸಿಡೋನ್ ನಲ್ಲಿರುವ ಪ್ಯಾಲೆಸ್ತೀನ್ ನಿರಾಶ್ರಿತರ ಶಿಬಿರದ ಮೇಲೂ ದಾಳಿ ನಡೆಸಿತು. ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.