ಗಾಜಿಯಾಬಾದ್ (www.vknews.in) : ಮುಸ್ಲಿಂ ವೃದ್ಧರೊಬ್ಬರ ಮಾಂಸದ ಅಂಗಡಿಯನ್ನು ಹಿಂದುತ್ವವಾದಿಗಳು ಬೆದರಿಕೆ ಹಾಕಿ ಮುಚ್ಚಿಸಿದ್ದಾರೆ. ಅಂಗಡಿ ತೆರೆದರೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಲಾಗಿದೆ. ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಿಂದೂತ್ವ ಸಂಘಟನೆಯಾದ ರಾಷ್ಟ್ರೀಯ ಹಿಂದೂ ವೀರ ಸೇನಾದ ನಾಯಕ ಸತ್ಯಂ ಪಂಡಿತ್ ಅಂಗಡಿಯನ್ನು ಮುಚ್ಚಿಸಿದ್ದಾರೆ. ದೇವಾಲಯ ಹತ್ತಿರದಲ್ಲೇ ಇರುವುದರಿಂದ ಮಾಂಸ ಮಾರಾಟಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಅವರು ಹೇಳಿದರು.
ಸತ್ಯಂ ಪಂಡಿತ್ ಅವರು ಫೆಬ್ರವರಿ 24 ರಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದ ಶೀರ್ಷಿಕೆ ಹೀಗಿತ್ತು, ‘ಮಂಗಳವಾರ ಗಾಜಿಯಾಬಾದ್ನಲ್ಲಿ ಮುಸ್ಲಿಮರಿಗೆ ಮಾಂಸ ಮಾರಾಟ ಮಾಡಲು ಅವಕಾಶವಿರುವುದಿಲ್ಲ. ಇಂದು ನಾನು ಕೈಲಾ ಭಟ್ಟಕ್ಕೆ ಹೋಗಿ ಎಲ್ಲಾ ಮಾಂಸದ ಅಂಗಡಿಗಳನ್ನು ಮುಚ್ಚಿದೆ.’
ವಿಡಿಯೋದಲ್ಲಿ, ಅವರು ಅಂಗಡಿಯೊಳಗೆ ನುಗ್ಗಿ “ಮಂಗಳವಾರ ಮಾಂಸ ಮಾರಾಟ ಮಾಡಲು ನಿಮಗೆ ಅನುಮತಿ ಇದೆಯೇ?” ಎಂದು ಕೇಳುವುದನ್ನು ಮತ್ತು ಅಂಗಡಿ ಮಾಲೀಕರಿಗೆ ಅಂಗಡಿ ಮುಚ್ಚುವಂತೆ ಬೆದರಿಕೆ ಹಾಕುವುದನ್ನು ಕಾಣಬಹುದು. “ಈಗ ಮುಚ್ಚಿ. ನಿಮ್ಮ ಮುಂದೆ ದೇವಸ್ಥಾನ ಕಾಣುತ್ತಿಲ್ಲವೇ? ಮಂಗಳವಾರ ಅಂಗಡಿ ತೆರೆದಿರಬಾರದು. ನೀವು ಅದನ್ನು ತೆರೆದರೆ, ನಿಮ್ಮನ್ನು ಮುಚ್ಚಲಾಗುತ್ತದೆ” ಎಂದು ಅವರು ಹೇಳುತ್ತಾರೆ.
ಅಂಗಡಿ ಮಾಲೀಕರು ಮತ್ತು ಕೆಲಸಗಾರರು ಬೆದರಿಕೆಗೆ ಮಣಿದು ಅಂಗಡಿಯನ್ನು ಮುಚ್ಚುತ್ತಿರುವುದನ್ನು ದೃಶ್ಯಾವಳಿಗಳಲ್ಲಿ ಕಾಣಬಹುದು. “ಮಂಗಳವಾರ ಅಂಗಡಿ ತೆರೆದಿರುವುದು ಕಂಡುಬಂದರೆ, ಒಂದು ನಿಮಿಷದೊಳಗೆ ನಾನು ಅದಕ್ಕೆ ಬೆಂಕಿ ಹಚ್ಚುತ್ತೇನೆ” ಎಂದು ಆ ವ್ಯಕ್ತಿ ಬೆದರಿಕೆ ಹಾಕಿದ್ದಾನೆ.
ಘಟನೆಯ ಬಗ್ಗೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸಂಪರ್ಕಿಸಿದಾಗ, ತನಿಖೆ ಮುಂದುವರಿದಿದ್ದರೂ, ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸ್ಟೇಷನ್ ಹೌಸ್ ಆಫೀಸರ್ ಮಾಹಿತಿ ನೀಡಿದರು.
“ಸಾಮಾಜಿಕ ಮಾಧ್ಯಮಗಳ ಮೂಲಕ ಈ ಮಾಹಿತಿ ಬಂದಿದೆ. ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಎಸ್ಎಚ್ಒ ಅವರ ಪ್ರತಿಕ್ರಿಯೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.