(www.vknews.in) : ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಗ್ರಾಮ ಪಂಚಾಯಿತಿ ವ್ಯಾಪ್ತಿಯ 3ನೇ ವಾರ್ಡ್ನಲ್ಲಿ ಸುಮಾರು 25 ರಿಂದ 30 ಮನೆಗಳಿರುವ ಈ ಪ್ರದೇಶದ ಜನರು ಹಲವು ವರ್ಷಗಳಿಂದ ರಸ್ತೆ ಸಮಸ್ಯೆಯಿಂದ ಬಳಲುತ್ತಿದ್ದರು. ಮಳೆಗಾಲದಲ್ಲಿ ಕೆಸರು, ಗುಂಡಿಗಳು ಮತ್ತು ನೀರು ನಿಂತು ಸಂಚಾರ ಅಸಾಧ್ಯವಾಗುತ್ತಿತ್ತು. ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಹಾಗೂ ದಿನಗೂಲಿ ಕಾರ್ಮಿಕರು ಪ್ರತಿದಿನ ಸಂಕಷ್ಟ ಅನುಭವಿಸುತ್ತಿದ್ದರು. ಪಂಚಾಯಿತಿಯಿಂದ ಯಾವುದೇ ಅನುದಾನ ಮಂಜೂರಾಗದ ಕಾರಣ ರಸ್ತೆ ದುರಸ್ತಿ ಕಾರ್ಯ ವಿಳಂಬವಾಗಿತ್ತು.
ಈ ಪರಿಸ್ಥಿತಿಯಲ್ಲಿ ಜನಸೇವಕ ಯುವ ನಾಯಕ, ಬಡವರ ಕಣ್ಮಣಿ ಅಬ್ದುಲ್ ರಝಾಕ್ ಬರ್ಕಟ ಚಾನ್ಸ್ ಅವರು ಸ್ವಂತ ಹಣ ಖರ್ಚು ಮಾಡಿ ಜೆಸಿಬಿ ಯಂತ್ರದ ಮೂಲಕ ರಸ್ತೆ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಹಾಳಾದ ಭಾಗಗಳನ್ನು ತೆಗೆಯಿಸಿ, ಗುಂಡಿಗಳನ್ನು ಮುಚ್ಚಿ, ರಸ್ತೆ ಸಮತಟ್ಟುಗೊಳಿಸುವ ಮೂಲಕ ಶಾಶ್ವತ ಪರಿಹಾರ ಒದಗಿಸುವ ಕಾರ್ಯ ನಡೆಯುತ್ತಿದೆ. ಇದರ ಸುಮಾರು 25 ರಿಂದ 30 ಮನೆಗಳ ಕುಟುಂಬಗಳಿಗೆ ಸುಗಮ ಸಂಚಾರ ವ್ಯವಸ್ಥೆ ಸಿಗುತ್ತಿದೆ.
ಅಬ್ದುಲ್ ರಝಾಕ್ ಬರ್ಕಟ ಚಾನ್ಸ್ ಅವರು ಕೇವಲ ಉದ್ಯಮಿ ಮಾತ್ರವಲ್ಲ, ಸಮಾಜಮುಖಿ ಚಿಂತನೆಯ ವ್ಯಕ್ತಿ. ತಮ್ಮ ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ. ಗ್ರಾಮದಲ್ಲಿನ ಬಡ ಕುಟುಂಬಗಳ ಹೆಣ್ಣುಮಕ್ಕಳ ಮದುವೆ ಸಂದರ್ಭಗಳಲ್ಲಿ ಸಹಾಯ ಕೇಳಿದರೆ ತಕ್ಷಣವೇ ನೆರವು ನೀಡುವ ಉದಾರ ಹೃದಯದ ವ್ಯಕ್ತಿ ಅವರು. ಅನೇಕ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಿ ಅವರ ಬದುಕಿಗೆ ಬೆಳಕು ತಂದಿದ್ದಾರೆ.
ಇದರ ಜೊತೆಗೆ, ಅವರು ಹಲವಾರು ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಮಾಜಿಕ, ಧಾರ್ಮಿಕ ಮತ್ತು ಯುವಜನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಯುವಕರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ ಮುನ್ನಡೆಸುವುದು ಅವರ ನಾಯಕತ್ವದ ವಿಶೇಷತೆ.
ಸರ್ಕಾರಿ ಅನುದಾನವಿಲ್ಲದೆ ಸ್ವಂತ ಹಣದಲ್ಲಿ ರಸ್ತೆ ದುರಸ್ತಿ ಮಾಡಿರುವುದು ಕೇವಲ ಒಂದು ಕಾಮಗಾರಿ ಅಲ್ಲ — ಅದು ಅವರ ನಿಸ್ವಾರ್ಥ ಸೇವಾ ಮನೋಭಾವದ ಪ್ರತೀಕ. “ನಾಯಕತ್ವ ಎಂದರೆ ಹುದ್ದೆ ಅಲ್ಲ, ಜನರ ನೋವಿಗೆ ಸ್ಪಂದಿಸುವ ಗುಣ” ಎಂಬುದನ್ನು ಅವರು ತಮ್ಮ ಕಾರ್ಯಗಳಿಂದ ಸಾಬೀತುಪಡಿಸಿದ್ದಾರೆ.
ತನ್ನ ಮನೆಯ ನೆರೆಕೆರೆಯವರಿಗೆ ಜಾತಿ ಮತ ಭೇದ ಮಾಡದೆ ಕುಡಿಯುವ ನೀರಿನ ಅಭಾವದ ಸಂದರ್ಭದಲ್ಲಿ ನೇರವಾಗಿ ಪೈಪ್ ಹಾಕಿ ನೀರು ಕೊಟ್ಟು ಮಾನವೀಯತೆ ಮೆರೆಯುವವರು
ಇಂತಹ ಸಮಾಜಸೇವಕರಿಂದಲೇ ಗ್ರಾಮಾಭಿವೃದ್ಧಿ ಸಾಧ್ಯ. ಅಬ್ದುಲ್ ರಝಾಕ್ ಬರ್ಕಟ ಚಾನ್ಸ್ ಅವರ ಸೇವಾ ಮನೋಭಾವ ಇನ್ನಷ್ಟು ವಿಸ್ತಾರವಾಗಲಿ, ಅವರ ಮೂಲಕ ಗ್ರಾಮದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂಬುದು ಗ್ರಾಮಸ್ಥರ ಆಶಯವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.