ದುಬೈ (www.vknews.in) | ದುಬೈನಲ್ಲಿ ಕೇರಳ ಮೂಲದ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ನಡೆದಿದೆ. ಮೃತರನ್ನು ಕೋಝಿಕ್ಕೋಡ್ನ ಚೆರುವಣ್ಣೂರಿನ ಮಧುರೈ ಬಜಾರ್ ನಿವಾಸಿ ಜಝೀಲ್ (32) ಎಂದು ಗುರುತಿಸಲಾಗಿದೆ.
ತಾನು ವಾಸಿಸುತ್ತಿದ್ದ ಕೊಠಡಿಯಲ್ಲಿ ಸ್ನೇಹಿತರ ನಡುವೆ ಉಂಟಾದ ವಾಗ್ವಾದವನ್ನು ಪರಿಹರಿಸಲು ಯತ್ನಿಸುವ ವೇಳೆ, ಜಝೀಲ್ ಅವರನ್ನು ಅವರ ಸ್ನೇಹಿತನೇ ಚಾಕುವಿನಿಂದ ಇರಿದಿದ್ದಾನೆ. ಕುತ್ತಿಗೆಗೆ ಗಂಭೀರ ಗಾಯಗೊಂಡ ಜಝೀಲ್ ಅವರನ್ನು ದುಬೈ ಪೊಲೀಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತದೇಹವನ್ನು ದುಬೈನ ಅಲ್ ರಶೀದಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಜಝೀಲ್ ಕಳೆದ ಮೂರು ವರ್ಷಗಳಿಂದ ದುಬೈನಲ್ಲಿ ಉದ್ಯೋಗದಲ್ಲಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.