ನವದೆಹಲಿ (www.vknews.in) : ನಾರಿಶಕ್ತಿ ವಂದನಾ ಬಿಲ್ ಮಂಡನೆಯಾಗದ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯಲ್ಲಿ ನಡೆದ ಘಟನೆಯನ್ನು ನೋಡಿ ನನಗೆ ವೈಯಕ್ತಿಕವಾಗಿ ದುಃಖವಾಯಿತು. ಮಸೂದೆ ಅಂಗೀಕಾರವಾಗಕ್ಕೆ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಸೇರಿದಂತೆ ವಿಪಕ್ಷಗಳು ಚಪ್ಪಾಳೆ ತಟ್ಟುವ ಮೂಲಕ ದೇಶದ ಮಹಿಳೆಯರನ್ನು ಅವಮಾನಿಸಿವೆ. ನಾರಿಶಕ್ತಿಗೆ ಕಾಂಗ್ರೆಸ್ ಮತ್ತು ಡಿಎಂಕೆ ಅವಮಾನ ಮಾಡಿವೆ. ನಾರಿಶಕ್ತಿ ಮಸೂದೆ ಮಂಡನೆಯಾಗದ್ದಕ್ಕೆ ವಿಪಕ್ಷಗಳು ಸಂಭ್ರಮಿಸುತ್ತಿವೆ ಎಂದು ಪ್ರಧಾನಿಗಳು ವಾಗ್ದಾಳಿ ನಡೆಸಿದರು
21ನೇ ಶತಮಾನದ ಮಹಿಳೆಯರು ಪ್ರತಿಯೊಂದು ಘಟನೆಯನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂಬುದನ್ನು ವಿಪಕ್ಷಗಳು ಮರೆಯುತ್ತಿವೆ. ಮಸೂದೆಯನ್ನು ವಿರೋಧಿಸುವ ಮೂಲಕ ವಿಪಕ್ಷಗಳು ಮಹಾ ಪಾಪ ಮಾಡಿವೆ. ಈ ಮಸೂದೆ ಯಾರಿಂದಲೂ ಏನನ್ನು ಕಿತ್ತುಕೊಳ್ಳುತ್ತಿರಲಿಲ್ಲ. ಎಲ್ಲರಿಗೂ ಏನನ್ನಾದ್ರೂ ನೀಡುವ ಮಸೂದೆ ಇದಾಗಿತ್ತು. ವಿಪಕ್ಷಗಳು ಜೊತೆಯಾಗಿ ಮಹಿಳೆಯರ ಹಕ್ಕುಗಳನ್ನು ಕಿತ್ತುಕೊಂಡು ನಾರಿಶಕ್ತಿಯನ್ನು ಕೊಲೆ ಮಾಡಿವೆ ಎಂದು ದೂರಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.