ಸೌದಿ ಅರೇಬಿಯಾ(www.vknews.in): ಪ್ರವಾಸಿ ಒಕ್ಕೂಟ ಕರ್ನಾಟಕ ಇದರ ವತಿಯಿಂದ ಆನ್ಲೈನ್ ನಲ್ಲಿ ಚರ್ಚಾಕೂಟವೊಂದು ನಡೆಯಿತು. ಚರ್ಚೆಯ ಪ್ರಮುಖ ಭಾಗವಾಗಿ ಅನಿವಾಸಿ ಕನ್ನಡಿಗರ ಸಮಸ್ಯೆಗಳು ಹಾಗೂ ಕರ್ನಾಟಕ ಸರಕಾರದ ವತಿಯಿಂದ ಅನಿವಾಸಿಗಳಿಗೆ ಇದುವರೆಗೂ ಯಾವುದೇ ರೀತಿಯ ಯೋಜನೆಗಳನ್ನು ಕೊಡದಿರುವ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಲಾಯಿತು. ಚರ್ಚೆಯಲ್ಲಿ ಪ್ರಮುಖವಾಗಿ ಸಯ್ಯದ್ ಶಾಹುಲ್ ಹಮೀದ್ (ಗಲ್ಫ್ ರಿಟೈರೀಸ್ ಕರ್ನಾಟಕ, ಅಧ್ಯಕ್ಷರು) ಭಾಗವಹಿಸಿ ವಿಷಯ ಮಂಡನೆ ಮತ್ತು ಚರ್ಚೆಗೆ ನೇತೃತ್ವ ವಹಿಸಿದ್ದರು.ರಾಜ್ಯ ಸರ್ಕಾರದ ಬಜೆಟ್ ಮಂಡನೆಯಲ್ಲಿ ಅನಿವಾಸಿ ಕರ್ನಾಟಕದವರಿಗೆ ಆದ್ಯತೆ ನೀಡಬೇಕು ಹಾಗೂ ಇದನ್ನು ಜಾರಿಗೆ ತಂದು ನಮ್ಮ ಬೇಡಿಕೆಗಳನ್ನು ಪೂರೈಸಬೇಕು ಎಂಬ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದರು.
ಕಲಂದರ್ ಬಜ್ಪೆ ಸ್ವಾಗತ ಮಾಡಿದರು. ರಿಯಾಝ್ ಇನೋಳಿ ರವರು ವಂದನೆ ಸಮರ್ಪಿಸಿದರು. ಕಾರ್ಯಕ್ರಮದ ನಿರೂಪನೆಯನ್ನು ಎ.ಎಸ್. ಕೌಸರಿ ಉಸ್ತಾದ್ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಪ್ರವಾಸಿ ಒಕ್ಕೂಟ ಕರ್ನಾಟಕ ಬಳಗದ ಅಡ್ಮೀನ್ ಗಳೆಲ್ಲರೂ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.