(www.vknews.in) : ನೌರತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆ ಮಿತ್ತೂರಿನ ವಿದ್ಯಾರ್ಥಿಗಳು ಈ ಸಾಲಿನ sslc ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಈ ವರ್ಷದ ಪರೀಕ್ಷೆಯಲ್ಲಿ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಯಶಸ್ವಿಯಾಗಿ ಉತ್ತೀರ್ಣರಾಗಿದ್ದು, ಅದರಲ್ಲಿ 5 Distinction 28 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ಹಾಗೂ 13 ವಿದ್ಯಾರ್ಥಿಗಳು second class ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿ ಸಾರಾ ನೈಫಾ 571 (ಶೇ.91.36) ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾದರೆ, ಸುಹೈರಾ ಫರ್ಹಾನ 569(ಶೇ.91.04 ) ದ್ವಿತೀಯ, ಮುಹಮ್ಮದ್ ಅಜೀಮ್ 552(ಶೇ. 88.32) ತೃತೀಯ, ಕೆ. ಪಿ. ಫಾತಿಮತ್ ಶೈಮಾ 549 ( ಶೇ. 87.84%) ಚತುರ್ಥ, ಜೌಹರತು ನಫೀಸಾ 539 ( ಶೇ. 86.24%) ಪಂಚಮ ಸ್ಥಾನ ಗಳಿಸಿದ್ದಾರೆ .
ಈ ಯಶಸ್ಸಿಗೆ ಕಾರಣರಾದ ನಮ್ಮ ಪರಿಶ್ರಮಿ ವಿದ್ಯಾರ್ಥಿಗಳು, ಪ್ರಾಂಶುಪಾಲರು,ಸಮರ್ಪಿತ ಶಿಕ್ಷಕರು ಹಾಗೂ ಸಹಕರಿಸಿದ ಪೋಷಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.