ಶ್ರೀನಿವಾಸಪುರ (www.vknews.in): ಬೆಂಗಳೂರು ವೆಂಕಟೇಶಪುರಂನ ಸತ್ಯಸೇವಾ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿನಿ ಸುಹಾ ನಾಜ್ನೀನ್ ಅವರು 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 559 ಅಂಕಗಳನ್ನು ಗಳಿಸಿ ವಿಶಿಷ್ಟ ಸಾಧನೆ ಮೆರೆದಿದ್ದಾರೆ. ಸುಹಾ ನಾಜ್ನೀನ್ ಕನ್ನಡದಲ್ಲಿ 104, ಇಂಗ್ಲಿಷ್ನಲ್ಲಿ 90, ಹಿಂದಿಯಲ್ಲಿ 97, ಅರ್ಥಶಾಸ್ತ್ರದಲ್ಲಿ 95, ರಾಜಕೀಯ ವಿಜ್ಞಾನದಲ್ಲಿ 94 ಹಾಗೂ ಸಮಾಜ ವಿಜ್ಞಾನದಲ್ಲಿ 79 ಅಂಕಗಳನ್ನು ಪಡೆದು ‘ಎ’ ಗ್ರೇಡ್ನೊಂದಿಗೆ ಉತ್ತೀರ್ಣರಾಗಿದ್ದಾರೆ. ಶಿಸ್ತುಬದ್ಧ ಓದು, ನಿರಂತರ ಪರಿಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ತಿಳಿದುಬಂದಿದೆ. ಶ್ರೀನಿವಾಸಪುರದ ಗಫರ್ ಖಾನ್ ಮೊಹಲ್ಲಾ ನಿವಾಸಿಗಳಾದ ಜಬೀರ್ ಪಾಷಾ ಹಾಗೂ ರಹೀಮಾ ದಂಪತಿಯ ಪುತ್ರಿಯಾಗಿರುವ ಸುಹಾ ನಾಜ್ನೀನ್ ಅವರ ಸಾಧನೆಗೆ ಕುಟುಂಬದಲ್ಲಿ ಹರ್ಷ ಮನೆಮಾಡಿದೆ. ವಿಶೇಷವಾಗಿ ತಂದೆ ಮತ್ತು ತಾಯಿ ಅವರ ಪ್ರೋತ್ಸಾಹ, ಆರೈಕೆ ಮತ್ತು ವಿದ್ಯಾಭ್ಯಾಸದ ಕಡೆ ತೋರಿದ ಕಾಳಜಿ ಸುಹಾ ಅವರ ಯಶಸ್ಸಿಗೆ ಬೆನ್ನೆಲುಬಾಗಿದೆ ಎಂದು ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.
ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ವಿದ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸಿದ್ದು, ಇತರ ವಿದ್ಯಾರ್ಥಿಗಳಿಗೆ ಇದು ಮಾದರಿಯಾಗಿದೆ ಎಂದು ಅಭಿನಂದಿಸಿದ್ದಾರೆ. ಶಾಲೆಯ ಮುಖ್ಯಸ್ಥರು ಮಾತನಾಡಿ, ಸುಹಾ ನಾಜ್ನೀನ್ ಅವರ ಸಾಧನೆ ಶಾಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೇರಲಿ ಎಂದು ಶುಭ ಹಾರೈಸಿದರು. ಉನ್ನತ ಶಿಕ್ಷಣದತ್ತ ಹೆಜ್ಜೆ ಇಡಲು ಪೋಷಕರು ಪ್ರೋತ್ಸಾಹ ನೀಡಿದ್ದು, ವಿದ್ಯಾರ್ಥಿನಿಯ ಭವಿಷ್ಯ ಉಜ್ವಲವಾಗಿರಲಿ ಎಂದು ಬಂಧುಬಳಗ, ಸ್ನೇಹಿತರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ. ಸುಹಾ ನಾಜ್ನೀನ್ ಅವರ ಸಾಧನೆ ಶ್ರೀನಿವಾಸಪುರ ಭಾಗದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.