ಪುತ್ತೂರು (www.vknews.in) : ಹಾರಾಡಿ ರೈಲ್ವೆ ಸೇತುವೆ ಬಳಿ ಕಾಮಗಾರಿ ಆರಂಭವಾಗುವುದರಿಂದ, ರಸ್ತೆ ಮುಚ್ಚಿ ಪರ್ಯಾಯ ರಸ್ತೆಯಾಗಿ ಎಪಿಎಂಸಿ ರಸ್ತೆಯನ್ನು ಬಳಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ, ಹಿನ್ನೆಲೆಯಲ್ಲಿ, ಎಪಿಎಂಸಿ ರಸ್ತೆಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ, ಪುತ್ತೂರಿನ ನ್ಯಾಯವಾದಿ ನೂರುದ್ದೀನ್ ಸಾಲ್ಮರವರು, ಪುತ್ತೂರು ಸಹಾಯಕ ಕಮಿಷನ್ ರವರಿಗೆ ಮನವಿ ಸಲ್ಲಿಸಿದ್ದರು.
ಮನವಿಗೆ ಶೀಘ್ರ ಸ್ಪಂದನ ನೀಡಿದ ಪುತ್ತೂರು ಸಹಾಯಕ ಕಮಿಷನರ್ ಸ್ಟೆಲ್ಲಾ ವರ್ಗೀಸ್ ರವರು , ಇಂದು ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ, ರಸ್ತೆಯ ವೀಕ್ಷಣೆಯನ್ನು ನಡೆಸಿ, ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಆದೇಶವನ್ನು ನೀಡಿದರು. ಪುತ್ತೂರು ಸಹಾಯಕ ಕಮಿಷನ್ ರವರ ಶೀಘ್ರ ಸ್ಪಂದನಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.