ನವದೆಹಲಿ (www.vknews.in) : ಪಾಸ್ಪೋರ್ಟ್ ಸೇವೆಗಳ ಶುಲ್ಕವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದ್ದು, ಪರಿಷ್ಕೃತ ದರಗಳು ಜುಲೈ 1, 2026ರಿಂದ ಜಾರಿಗೆ ಬರಲಿವೆ. ವಿದೇಶಾಂಗ ಸಚಿವಾಲಯವು ಪಾಸ್ಪೋರ್ಟ್ ನಿಯಮಗಳಿಗೆ ತಿದ್ದುಪಡಿ ಮಾಡಿ ಹೊಸ ಶುಲ್ಕವನ್ನು ಪ್ರಕಟಿಸಿದೆ.
ಹೊಸ ದರಗಳ ಪ್ರಕಾರ, 36 ಪುಟಗಳ ಸಾಮಾನ್ಯ ಪಾಸ್ಪೋರ್ಟ್ ಹಾಗೂ ಅದರ ನವೀಕರಣಕ್ಕೆ ₹2,500, ತತ್ಕಾಲ್ ಸೇವೆಗೆ ₹5,000 ಶುಲ್ಕ ನಿಗದಿಯಾಗಿದೆ. 60 ಪುಟಗಳ ಪಾಸ್ಪೋರ್ಟ್ಗೆ ಸಾಮಾನ್ಯ ಸೇವೆಯಲ್ಲಿ ₹3,500 ಹಾಗೂ ತತ್ಕಾಲ್ ಸೇವೆಯಲ್ಲಿ ₹6,000 ಪಾವತಿಸಬೇಕಾಗುತ್ತದೆ.
ಪಾಸ್ಪೋರ್ಟ್ ಕಳೆದುಹೋದರೆ ಅಥವಾ ಹಾನಿಗೊಳಗಾದರೆ ಹೊಸ ಪಾಸ್ಪೋರ್ಟ್ ಪಡೆಯುವ ಶುಲ್ಕದಲ್ಲಿ ಹೆಚ್ಚಿನ ಏರಿಕೆ ಮಾಡಲಾಗಿದೆ. 36 ಪುಟಗಳ ಪಾಸ್ಪೋರ್ಟ್ಗೆ ಸಾಮಾನ್ಯ ಸೇವೆಯಲ್ಲಿ ₹5,000, ತತ್ಕಾಲ್ ಸೇವೆಯಲ್ಲಿ ₹7,500 ನಿಗದಿಯಾಗಿದೆ. 60 ಪುಟಗಳ ಪಾಸ್ಪೋರ್ಟ್ಗೆ ಕ್ರಮವಾಗಿ ₹6,000 ಮತ್ತು ₹8,500 ಶುಲ್ಕ ವಿಧಿಸಲಾಗುತ್ತದೆ.
ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ (PCC), ಶರಣಾಗತಿ ಪ್ರಮಾಣಪತ್ರ ಹಾಗೂ ಇತರ ಸಂಬಂಧಿತ ಸೇವೆಗಳ ಶುಲ್ಕವನ್ನು ₹750ಗೆ ನಿಗದಿಪಡಿಸಲಾಗಿದೆ. ಗುರುತಿನ ಪ್ರಮಾಣಪತ್ರಕ್ಕೆ ₹1,000 ಶುಲ್ಕ ವಿಧಿಸಲಾಗುತ್ತದೆ. ಆದರೆ, ಪಾಸ್ಪೋರ್ಟ್ನ ಮಾನ್ಯತಾ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ವಯಸ್ಕರಿಗೆ 10 ವರ್ಷ ಹಾಗೂ ಅಪ್ರಾಪ್ತ ವಯಸ್ಕರಿಗೆ 5 ವರ್ಷ ಅಥವಾ 18 ವರ್ಷ ತುಂಬುವವರೆಗೆ ಪಾಸ್ಪೋರ್ಟ್ ಮಾನ್ಯವಾಗಿರುತ್ತದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.