ಫರೀದಾಬಾದ್ (www.vknews.in) : ಹರಿಯಾಣದ ಫರೀದಾಬಾದ್ನಲ್ಲಿ 28 ವರ್ಷದ ಯುವ ಉದ್ಯಮಿಯೊಬ್ಬರು ಪತ್ನಿ ಹಾಗೂ ಆಕೆಯ ಕುಟುಂಬದವರಿಂದ ನಿರಂತರ ಮಾನಸಿಕ ಮತ್ತು ದೈಹಿಕ ಕಿರುಕುಳ ಎದುರಿಸುತ್ತಿದ್ದೇನೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತರನ್ನು ರಾಹುಲ್ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಮುನ್ನ ಅವರು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಪತ್ನಿ ಜ್ಯೋತಿ, ಅತ್ತೆ, ಮಾವ ಹಾಗೂ ಪತ್ನಿಯ ಸಹೋದರಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮನೆಯ ಎಲ್ಲಾ ಕೆಲಸಗಳನ್ನು ತಾನೇ ಮಾಡುತ್ತಿದ್ದರೂ ಹಲ್ಲೆ, ಬೆದರಿಕೆ ಮತ್ತು ಸುಳ್ಳು ಪ್ರಕರಣಗಳ ಭಯದಿಂದ ಮಾನಸಿಕವಾಗಿ ಕುಗ್ಗಿದ್ದೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಕುಟುಂಬದವರ ಪ್ರಕಾರ, ಎರಡು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ರಾಹುಲ್ ಬಳಿಕ ಪತ್ನಿಯೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇತ್ತೀಚೆಗೆ ಪತ್ನಿ ನೀಡಿದ್ದ ದೂರು ಮತ್ತು ಕುಟುಂಬದ ಕಲಹದಿಂದ ಅವರು ತೀವ್ರ ಒತ್ತಡದಲ್ಲಿದ್ದರು ಎನ್ನಲಾಗಿದೆ.
ಭಾನುವಾರ ತಮ್ಮ ಬಟ್ಟೆ ಅಂಗಡಿಗೆ ತೆರಳಿದ ರಾಹುಲ್, ವಿಡಿಯೋ ಅಪ್ಲೋಡ್ ಮಾಡಿದ ಕೆಲವೇ ಹೊತ್ತಿನಲ್ಲಿ ಅಂಗಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಡಿಯೋ ಗಮನಿಸಿದ ಸಹೋದರ ಅಂಗಡಿಗೆ ಧಾವಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಮೃತರ ಕುಟುಂಬದ ದೂರಿನ ಆಧಾರದಲ್ಲಿ ಪೊಲೀಸರು ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ವೈರಲ್ ವಿಡಿಯೋವನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿ ತನಿಖೆ ಮುಂದುವರಿಸಿದ್ದಾರೆ. ಆರೋಪಗಳ ಸತ್ಯಾಸತ್ಯತೆ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.
A 28-year-old businessman in Faridabad died by suicide inside his shop on Sunday after hanging himself. Before taking the extreme step, he posted a video on Instagram in which he accused his wife and her family of mentally harassing him. Police have launched an investigation and… pic.twitter.com/xFZkBuC6rQ — Hate Detector 🔍 (@HateDetectors) June 29, 2026
A 28-year-old businessman in Faridabad died by suicide inside his shop on Sunday after hanging himself. Before taking the extreme step, he posted a video on Instagram in which he accused his wife and her family of mentally harassing him.
Police have launched an investigation and… pic.twitter.com/xFZkBuC6rQ
— Hate Detector 🔍 (@HateDetectors) June 29, 2026
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.