ಕೋಲಾರ(www.vknews.in): ಪತ್ರಕರ್ತರ ದಿನಾಚರಣೆಯ ಅಂಗವಾಗಿ ಪತ್ರಕರ್ತರು ಹಾಗೂ ಅವರ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಉದ್ದೇಶದಿಂದ ಜುಲೈ 1ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಕೋಲಾರದ ವಂಶೋದಯ ಅಡ್ವಾನ್ಸ್ಡ್ ಮಲ್ಟಿ ಸ್ಪೆಷಾಲಿಟಿ ಸೆಂಟರ್ ಹಾಗೂ ವಂಶೋದಯ ಹಾರ್ಟ್ ಸೆಂಟರ್ ವತಿಯಿಂದ ಬುಧವಾರ (ಜುಲೈ 1) ಬೆಳಿಗ್ಗೆ 9 ಗಂಟೆಯಿಂದ ಕೋಲಾರದ ಪತ್ರಕರ್ತರ ಭವನದಲ್ಲಿ ಈ ವಿಶೇಷ ಶಿಬಿರ ನಡೆಯಲಿದೆ. ಶಿಬಿರದಲ್ಲಿ ತಜ್ಞ ಹೃದ್ರೋಗ ತಜ್ಞರಿಂದ (ಕಾರ್ಡಿಯೋಲಾಜಿಸ್ಟ್) ಉಚಿತ ಸಮಾಲೋಚನೆ ನೀಡಲಾಗುತ್ತದೆ. ಸಮಾಲೋಚನೆ ವೇಳೆ ಉಚಿತ ಇಸಿಜಿ (ECG) ಪರೀಕ್ಷೆ ನಡೆಸಲಾಗುವುದು. ಅಗತ್ಯವಿರುವವರಿಗೆ ಎಕೋ (ECHO) ಪರೀಕ್ಷೆಯನ್ನು ವಿಶೇಷ ವಿನಾಯಿತಿ ದರದಲ್ಲಿ ಮಾಡಿಕೊಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕೋಲಾರ ಜಿಲ್ಲೆಯ ಪತ್ರಕರ್ತರು ಹಾಗೂ ಅವರ ಕುಟುಂಬ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಆರೋಗ್ಯ ಶಿಬಿರದ ಪ್ರಯೋಜನ ಪಡೆಯುವಂತೆ ವಂಶೋದಯ ಅಡ್ವಾನ್ಸ್ಡ್ ಮಲ್ಟಿ ಸ್ಪೆಷಾಲಿಟಿ ಸೆಂಟರ್ ಮತ್ತು ವಂಶೋದಯ ಹಾರ್ಟ್ ಸೆಂಟರ್ ಆಡಳಿತ ಮಂಡಳಿ ಮನವಿ ಮಾಡಿದೆ. ಶಿಬಿರವು ಕೋಲಾರದ ಕುವೆಂಪು ನಗರದಲ್ಲಿರುವ ಪತ್ರಕರ್ತರ ಭವನದಲ್ಲಿ (4ನೇ ಕ್ರಾಸ್, ಕುವೆಂಪು ಪಾರ್ಕ್ ಸಮೀಪ, ಅಂತರಗಂಗೆ ಮುಖ್ಯ ರಸ್ತೆ) ನಡೆಯಲಿದೆ. ಪತ್ರಕರ್ತರ ಆರೋಗ್ಯ ರಕ್ಷಣೆಗೆ ಇದು ಉತ್ತಮ ಅವಕಾಶವಾಗಿದ್ದು, ಎಲ್ಲರೂ ಸದುಪಯೋಗಪಡಿಸಿಕೊಳ್ಳುವಂತೆ ಸಂಘಟಕರು ಕೋರಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.