(www.vknews.in) : ಪುತ್ತೂರನ್ನು ಕೇಂದ್ರೀಕರಿಸಿ ಕಳೆದ ಹಲವು ವರ್ಷಗಳಿಂದ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಇ-ಫ್ರೆಂಡ್ಸ್ ಪುತ್ತೂರು (ಇ-ಫೌಂಡೇಶನ್ ಇಂಡಿಯಾ) ವತಿಯಿಂದ, NEET ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ MBBS ಪ್ರವೇಶ ಪಡೆದ ಪುತ್ತೂರು ತಾಲೂಕಿನ ವಿದ್ಯಾರ್ಥಿಗಳನ್ನು ಗೌರವಿಸುವ ಸನ್ಮಾನ ಸಮಾರಂಭ ಪುತ್ತೂರು ಬೈಪಾಸ್ನ ಆಶ್ಮಿ ಕಂಫರ್ಟ್ಸ್ನಲ್ಲಿ ನಡೆಯಿತು. 2025–26ನೇ ಸಾಲಿನಲ್ಲಿ NEET ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ, ಒಂದು ವರ್ಷದ ಕಠಿಣ ಪರಿಶ್ರಮ, ಶಿಸ್ತು ಮತ್ತು ದೃಢಸಂಕಲ್ಪದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ SA Engineering ಜುಬೈಲ್ನ ಆಸಿಫ್ ದರ್ಬೆ, Proservo ಜುಬೈಲ್ನ ತಾಸಿರ್, ದುಬೈ ಉದ್ಯಮಿ ಶಮೀರ್ ಕಲ್ಲಾರೆ, Medland Specialty Hospitalನ Managing Director ಅಶ್ಮೀರ್ ಕಮ್ಮಾಡಿ, Fahad Engineering ಜುಬೈಲ್ನ ಫೈರೋಜ್ ಪರ್ಲಡ್ಕ, Teuber ಜುಬೈಲ್ನ ತಾಹೀರ್ ಸಾಲ್ಮರ, ದುಬೈ ಉದ್ಯಮಿ ಶಾಕೀರ್ ಕೂರ್ನಡ್ಕ ಹಾಗೂ ಸೌದಿ ಅರೇಬಿಯಾ ಉದ್ಯಮಿ ಶಮ್ಮಸ್ ಪರ್ಲಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಸಮಾರಂಭದ ವಿಶೇಷವಾಗಿ, MBBS ನಂತರದ ವೃತ್ತಿಜೀವನದ ಗುರಿಗಳು, ವೈದ್ಯಕೀಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಕನಸುಗಳು ಹಾಗೂ ಭವಿಷ್ಯದಲ್ಲಿ ಸಮಾಜಕ್ಕೆ ಯಾವ ರೀತಿಯ ಸೇವೆ ಸಲ್ಲಿಸಲು ಬಯಸುತ್ತಾರೆ ಎಂಬ ವಿಷಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವೂ ನಡೆಯಿತು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಸಮಾಜಮುಖಿ ಚಿಂತನೆ ಬೆಳೆಸುವ ನಿಟ್ಟಿನಲ್ಲಿ ಈ ಸಂವಾದ ಮಹತ್ವ ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಮಹಮ್ಮದ್ ಶಾಕೀರ್, ಮಹಮ್ಮದ್ ಅಫಿಲ್, ಶಮೀಲ್ ಸಾಮೆತಡ್ಕ, ಮಹಮ್ಮದ್ ಅಕ್ಮಲ್, ಫಾತಿಮತ್ ಶಬಾ ಬಪ್ಪಳಿಗೆ, ಫಾತಿಮಾ ಎ.ಎಂ. ವಳತಡ್ಕ, ಕಲಂದರ್ ರಮೀನಾ, ಖದೀಜಾ ಮರ್ಷತ್, ಜೈನಾಬ್ ತೌಫೀರ ಹಾಗೂ ಅಜ್ವೀನಾ ಬಲ್ನಾಡ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇ-ಫ್ರೆಂಡ್ಸ್ನ ಡಾ. ಸರ್ಫ್ರಾಜ್, ಮುಝ ಜುಬೈಲ್, ಶಾಕೀರ್, ರಿಯಾಝ್ ಝಾರ ಹಾಗೂ ಹನೀಫ್ ಪುಂಚತ್ತಾರ್ ಉಪಸ್ಥಿತರಿದ್ದರು.
ಇ-ಫ್ರೆಂಡ್ಸ್ ಅಧ್ಯಕ್ಷ ಆರೀಫ್ ಸಾಲ್ಮರ ಹಾಗೂ ಹೈದರ್ ಚಾಯ್ಸ್ ಅತಿಥಿಗಳನ್ನು ಸ್ವಾಗತಿಸಿದರು. ಇಮ್ತಿಯಾಜ್ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ, ಅವರ ಕನಸುಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ, ಭವಿಷ್ಯದಲ್ಲಿ ಸಮಾಜಕ್ಕೆ ಜವಾಬ್ದಾರಿಯುತ ವೈದ್ಯರಾಗಿ ಸೇವೆ ಸಲ್ಲಿಸುವಂತೆ ಪ್ರೇರೇಪಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.