ವಿಟ್ಲ (www.vknews.in) : ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕನ್ಯಾನ ಗ್ರಾಮದ ಕುಕ್ಕಾಜೆ ಎಂಬಲ್ಲಿನ ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಹಿದಾಯತುಲ್ ಇಸ್ಲಾಂ ಮದ್ರಸ ಕುಕ್ಕಾಜೆ (ಕನ್ಯಾನ) ಇದರ ವಠಾರದಲ್ಲಿ, ದೇಶದ 80ನೇ ಸ್ವಾತಂತ್ರ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಇಸ್ಮಾಯಿಲ್ ಕುಕ್ಕಾಜೆ ರವರು ಧ್ವಜಾರೋಹಣ ನೆರವೇರಿಸಿದರು.
ಈ ಸಂಧರ್ಭದಲ್ಲಿ ಮಸೀದಿಯ ಖತೀಬರಾದ ನಿಯಾಝ್ ಕಾಮಿಲ್ ಸಖಾಫಿ, ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶ್ರೀ ಅಬ್ದುಲ್ಲಾ ಕೆ.ಬಿ. ಕುಕ್ಕಾಜೆ, ಉಪಾಧ್ಯಕ್ಷರಾದ ಶ್ರೀ ಎಸ್. ಎಂ. ಇಬ್ರಾಹಿಮ್ ಉದ್ದಂತೋಟು ಮತ್ತು ಮಸೀದಿ ಆಡಳಿತ ಸಮಿತಿಯ ಸದಸ್ಯರುಗಳಾದ, ಸರ್ವಶ್ರೀ ಅಬ್ದುಲ್ ಹಮೀದ್ ಪಡೀಲ್ ಕುಕ್ಕಾಜೆ, ಕೆ.ಕೆ.ಶರಫುದ್ದೀನ್, ಕೆ ಪಿ ಪುತ್ತು ಮುಹಮ್ಮದ್ ಪಂಜಾಜೆ, ಅಬ್ದುಲ್ಲಾ ಮುಸ್ಲಿಯಾರ್ ಕುಕ್ಕಾಜೆ , ಅಬ್ದುಲ್ಲ ಎಸ್. ಎಂ. ಉದ್ದಂತೋಟು, ಕೆ.ಕೆ. ಅಬ್ದುಲ್ ರಹಿಮಾನ್ ಪಡೀಲ್ ಕುಕ್ಕಾಜೆ ಸಹಿತ ಜಮಾತ್ ಸದಸ್ಯರಾದ ಹಲವು ಗಣ್ಯರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.