ತಬುಕ್(www..vknews.in): ಮರಣದಂಡನೆಗೆ ಕೆಲವೇ ಕ್ಷಣಗಳು ಉಳಿದಿರುವಾಗ, ಕೊಲೆ ಆರೋಪಿ ಸೌದಿ ಯುವಕನಿಗೆ ಹೊಸ ಜೀವಮಾನ ನೀಡಿದ ಘಟನೆ ತಬೂಕಿನಿಂದ ವರದಿಯಾಗಿದೆ. ಕೊಲೆಯಾದ ಯುವಕನ ತಂದೆ ಕೊನೆಯ ಕ್ಷಣದಲ್ಲಿ ಕರುಣೆಯ ಹಸ್ತ ಚಾಚಿದಾಗ ಆರೋಪಿ ಅಬ್ದುಲ್ ಅಜೀಜ್ ಅಬ್ದುಲ್ಲಾ ಹುಸೇನ್ ಅಲ್-ಅಟಾವಿ ಎಂಬ ಯುವಕ ಸಾವಿನ ಅಂಚಿನಿಂದ ಮತ್ತೆ ಬದುಕಿದ. ತನ್ನ ಮಗನನ್ನು ಕೊಂದ ವ್ಯಕ್ತಿಗೆ ಶಿರಚ್ಛೇಧಕ್ಕಿಂದ ಬೇರೆ ಶಿಕ್ಷೆ ಇಲ್ಲ ಎಂದು ಪಟ್ಟು ಹಿಡಿದಿದ್ದ ಕೊಲೆಗೀಡಾಗಿದ್ಗ ವ್ಯಕ್ತಿಯ ತಂದೆ ಇಬ್ರಾಹಿಂ ಸಲಾಮಾ ಅಲ್-ಹುವೈತಿ ಆತನನ್ನು ಕ್ಷಮಿಸುವ ಮೂಲಕ ಕ್ಷಮೆಯ ಉತ್ತಮ ಉದಾಹರಣೆಯನ್ನು ನೀಡಿದರು. ತನ್ನ ಮಗನ ಕೊಲೆಗಾರ ಅನಾಥ ಮತ್ತು ತಾಯಿಯ ಏಕೈಕ ಆಧಾರವಾಗಿದ್ದ ಎಂದು ಅರಿತುಕೊಂಡ ಕ್ಷಣ, ತಂದೆ ಭಾವುಕನಾಗಿ ಆರೋಪಿಯನ್ನು ಕ್ಷಮಿಸಿದರು. ದೇವರ ಸಂತೋಷವನ್ನು ಮಾತ್ರ ಬಯಸಿ ಅವರು ಆರೋಪಿಯನ್ನು ಕ್ಷಮಿಸಲು ನಿರ್ಧರಿಸಿದನು. ನೆರೆದಿದ್ದ ಅನೇಕ ದನರು ಇಬ್ರಾಹಿಂ ಸಲಾಮಾ ಅವರ ಮಾನವೀಯತೆಯ ಹೃದಯವನ್ನು ಕೊಂಡಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.