ಅಲ್ ಹಸ್ಸ(www.vknews.in): ಭಾರತದ 80ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ, ‘ಅಲ್ ಹಸ್ಸ ಮಂಗಳೂರಿಯನ್ಸ್ ಕಮ್ಯೂನಿಟಿ’ (AMC) ಆಶ್ರಯದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಆಗಸ್ಟ್ 21, 2026ರಂದು ಸೌದಿ ಅರೇಬಿಯಾದ ಅಲ್ ಹಸ್ಸದಲ್ಲಿರುವ ಮೆಟರ್ನಿಟಿ & ಚಿಲ್ಡ್ರನ್ ಹಾಸ್ಪಿಟಲ್ನಲ್ಲಿ ಯಶಸ್ವಿಯಾಗಿ ನಡೆಯಿತು. 60 ವರ್ಷ ಪ್ರಾಯದ ಹಿರಿಯರಾದ ಉಮರುಲ್ ಫಾರೂಕ್ ಅಡ್ಡೂರು ಅವರು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ, ಇಂದಿನ ಯುವ ಪೀಳಿಗೆಗೆ ಮಾದರಿಯಾದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ AMC ಅಧ್ಯಕ್ಷರಾದ ಹನೀಫ್ ಮನಲ್ ಮಾತನಾಡಿ, “ಪ್ರತಿಯೊಂದು ರಕ್ತದಾನವೂ ಒಂದು ಕುಟುಂಬದ ಕಣ್ಣೀರನ್ನು ಒರೆಸಿ, ಹೊಸ ಜೀವನಕ್ಕೆ ಭರವಸೆ ನೀಡುತ್ತದೆ” ಎಂದು ಸಾರ್ವಜನಿಕರ ಸೇವೆಯನ್ನು ಸ್ಮರಿಸಿದರು. ರಕ್ತದಾನದ ಮೂಲಕ ಮಾನವೀಯತೆ ಮೆರೆದ ಎಲ್ಲಾ ರಕ್ತದಾನಿಗಳಿಗೆ, ಹಾಗೂ ಪೂರ್ಣ ಸಹಕಾರ ನೀಡಿದ ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೆ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಕಾರಣ ಕರ್ತರಾದ AMC ವರ್ಕಿಂಗ್ ಸಮಿತಿಯ ಎಲ್ಲಾ ಸದಸ್ಯರಿಗೆ AMC ಕಾರ್ಯದರ್ಶಿ ಶರೀಫ್ G ಅಡ್ಡೂರು ರವರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು. ಕಾರ್ಯಕ್ರಮದ ಉಸ್ತುವಾರಿಯನ್ನು ಬದ್ರುದ್ದೀನ್ ಪಡುಬಿದ್ರಿ ಹಾಗೂ ಹಮೀದ್ ಪಾತೂರು ವಹಿಸಿದ್ದರು.
ವರದಿ: ಹನೀಫ್ ಮನಲ್ , ಅಧ್ಯಕ್ಷರು, AMC ಅಲ್ ಹಸ್ಸ, ಸೌದಿ ಅರೇಬಿಯಾ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.