ಪುತ್ತೂರು (www.vknews.in) : ಕಟ್ಟತ್ತಾರಿನ ಅನಿವಾಸಿಗರ ಸಂಘಟನೆ ಸಮಸ್ತ ಗಲ್ಫ್ ಬ್ರದರ್ಸ್ ಕಟ್ಟತ್ತಾರು ಇದರ 7ನೇ ವಾರ್ಷಿಕ ಮಹಾಸಭೆ ನವಾಝ್ ಅವರ ಅಧ್ಯಕ್ಷತೆಯಲ್ಲಿ zoom online ಮೂಲಕ ನಡೆಯಿತು. ಹಾಜಿ ಉಮ್ಮರ್ ಮುಸ್ಲಿಯಾರ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ಬಿ.ಎಸ್. ರೌಫ್ ಉದ್ಘಾಟಿಸಿದರು. ಶರೀಫ್ ಮುಗುಳಿ ಸೌದಿ ಅರೇಬಿಯಾ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಖಾದರ್ ನಿಡ್ಯಾಣ ವಾರ್ಷಿಕ ವರದಿ ಮಂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ನವಾಝ್ ದುಬೈ ಮಾತನಾಡಿ, ಕಳೆದ ವರ್ಷ ಸಂಘಟನೆಯ ಮೂಲಕ ನಡೆಸಿದ ವಿವಿಧ ಸೇವಾ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಬಡವರ ಕಲ್ಯಾಣ, ಚಿಕಿತ್ಸಾ ನೆರವು, ಶೈಕ್ಷಣಿಕ ಸಹಾಯ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿ ಕಾರ್ಯಗಳನ್ನು ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಶರೀಫ್ ಕೆ.ಎ. ಚುನಾವಣಾಧಿಕಾರಿಯಾಗಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು. 2026-27ನೇ ಸಾಲಿಗೆ ಮೂಸಾ ಬದ್ರಿಯಾ ಅಧ್ಯಕ್ಷರಾಗಿ, ಜಾಸಿಮ್ ಪ್ರಧಾನ ಕಾರ್ಯದರ್ಶಿಯಾಗಿ, ಅಶ್ರಫ್ ಕೆ. ಖಜಾಂಚಿಯಾಗಿ ಹಾಗೂ ಶರೀಫ್ ಮುಗುಳಿ ಗೌರವಾಧ್ಯಕ್ಷರಾಗಿ ಆಯ್ಕೆಯಾದರು. ಮುಸ್ತಫಾ ಬಿ.ಎಂ. ಉಪಾಧ್ಯಕ್ಷರಾಗಿ, ಹಾಶೀರ್ ನಂಜೆ ಉಪಕಾರ್ಯದರ್ಶಿಯಾಗಿ ಹಾಗೂ ಸಮದ್ ಕಾರ್ಯಾಧ್ಯಕ್ಷ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಕಾರ್ಯಕಾರಿ ಸದಸ್ಯರಾಗಿ ಬಶೀರ್ ಒಮಾನ್, ನವಾಝ್, ಶರೀಫ್ ಕೆ.ಎ., ಮನ್ಸೂರ್, ಖಾದರ್, ಜಲೀಲ್ ಟಿ.ಎಂ., ಹನೀಫ್ ಹಾಗೂ ಬಿ.ಎಸ್. ರೌಫ್ ಆಯ್ಕೆಯಾದರು.
ಬಡವರ ಕಣ್ಣೀರೊರೆಸುವುದು, ರೋಗಿಗಳಿಗೆ ಚಿಕಿತ್ಸಾ ನೆರವು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಹಾಗೂ ಅಗತ್ಯವಿರುವ ಕುಟುಂಬಗಳಿಗೆ ನೆರವಾಗುವ ಮೂಲಕ ಮಾನವೀಯ ಮತ್ತು ಸಾಮಾಜಿಕ ಸೇವಾ ಕಾರ್ಯಗಳನ್ನು ಮುಂದುವರಿಸುವ ಸಂಕಲ್ಪವನ್ನು ನೂತನ ಸಮಿತಿ ವ್ಯಕ್ತಪಡಿಸಿತು.
ಹೈದರ್ ಯಾಮಾನಿ ವಂದಿಸಿದರು.ಸೌದಿ ಅರೇಬಿಯಾ,ಒಮಾನ್, ಯುನೈಟೆಡ್ ಅರಬ್ ಏಮಿರೇಟ್,ಕತಾರ್,ಕುವೈಟ್ GCC ರಾಷ್ಟ್ರ ಗಳ್ಳಿನ ಸದಸ್ಯರು ಭಾಗವಹಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.