ಬಂಟ್ವಾಳ (www.vknews.in) : ಸ್ಕ್ವಾಯ್ ಅಶೋಸಿಯೇಷನ್ ಆಫ್ ಕರ್ನಾಟಕ ಆಯೋಜಿಸಿದ ಕರ್ನಾಟಕ ರಾಜ್ಯ ಸ್ಕ್ವಾಯ್ ಚಾಂಪಿಯನ್ ಶಿಪ್ ಮತ್ತು ಸೆಲೆಕ್ಷನ್ ಟ್ರಯಲ್ ನಲ್ಲಿ ಮಜ್ಲಿಸ್ ಪಬ್ಲಿಕ್ ಸ್ಕೂಲ್ ಗಾಣೆಮಾರ್ ಬಡಕಬೈಲ್ ಇದರ ವಿದ್ಯಾರ್ಥಿನಿಯಾದ ಆಯಿಷಾ ಇನಾಝ್ ಪ್ರಥಮ ಸ್ಥಾನ ಪಡೆದು (ಅಂಡರ್ 14 – open category) ಚಿನ್ನದ ಪದಕದ ಸಾಧನೆ ಮಾಡಿದರು.
ಈ ಮೂಲಕ ಒಡಿಶಾ ದಲ್ಲಿ ನಡೆಯಲಿರುವ ರಾಷ್ಟ್ರ ಸ್ಕ್ವಾಯ್ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆದು ಆಯ್ಕೆಯಾದರು. ಮತ್ತೋರ್ವ ವಿದ್ಯಾರ್ಥಿನಿ ಆಯಿಷಾ ರಿಮಾಸ್ ತೃತೀಯ ಸ್ಥಾನ ಪಡೆದು (under 14, -45 category) ಕಂಚಿನ ಪದಕದ ಸಾಧನೆ ಮಾಡಿದರು.
ಈ ಇಬ್ಬರು ವಿದ್ಯಾರ್ಥಿಗಳು ಸರ್ಫರಾಜ್ ಅಬ್ದುಲ್ ಖಾದಿರ್ ಇವರಿಂದ ತರಬೇತಿ ಪಡೆಯುತ್ತಿದ್ದಾರೆ. ಇವರ ಸಾಧನೆ ಯನ್ನು ಮಜ್ಲಿಸ್ ಪಬ್ಲಿಕ್ ಸ್ಕೂಲ್ ಗಾಣೆಮಾರ್ ಬಡಕಬೈಲ್ ಸಂಸ್ಥೆ ಅಭಿನಂದಿಸುತ್ತದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.