ದುಬೈ(www.vknews.in)ಇರಾನ್ನೊಂದಿಗಿನ ಯುದ್ಧದ ನಡುವೆಯೂ ಹಾರ್ಮುಜ್ ಜಲಸಂಧಿಯು ವಿವಾದಾತ್ಮಕವಾಗಿಯೇ ಉಳಿದಿದ್ದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹಾರ್ಮುಜ್ ಜಲಸಂಧಿಯನ್ನು “ಟ್ರಂಪ್ ಜಲಸಂಧಿ” ಎಂದು ಮರುನಾಮಕರಣ ಮಾಡಲು ಸೂಚಿಸಿದ್ದಾರೆ. “ಈಗ ನಾವು ಹಾರ್ಮುಜ್ ನ್ನು ಅಮೆರಿಕದ ನಿಯಂತ್ರಣದಲ್ಲಿ ಹೊಂದಿದ್ದೇವೆ, ನಾವು ಹಾರ್ಮುಜ್ ಜಲಸಂಧಿಯ ಹೆಸರನ್ನು ಟ್ರಂಪ್ ಸ್ಟ್ರೈಟ್ ಎಂದು ಬದಲಾಯಿಸಬೇಕು ಎಂದು ಟ್ರಂಪ್ ತಮ್ಮ ಟ್ರೂತ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಇದು ಟ್ರಂಪ್ ಮಾಡಿದ ಇತ್ತೀಚಿನ ಭೌಗೋಳಿಕ ಹೆಸರು ಬದಲಾವಣೆಯಾಗಿದ್ದು, ಕೆನಡಾದೊಂದಿಗಿನ ವ್ಯಾಪಾರ ಯುದ್ಧದ ಮಧ್ಯೆ ಒಂಟಾರಿಯೊ ಸರೋವರವನ್ನು “ಲೇಕ್ ಅಮೆರಿಕಾ” ಎಂದು ಮರುನಾಮಕರಣ ಮಾಡಲು ಆದೇಶಿಸಿದ ಒಂದು ವಾರದ ನಂತರ ಟ್ರಂಪ್ ಹಾರ್ಮುಜ್ ಮರು ನಾಮಕರಣದ ಕುರಿತು ಹೇಳಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.