ಜೆದ್ದಾ(www.vknews.in): ಸೌದಿ ಅರೇಬಿಯಾದ ಪ್ರಮುಖ ಆರು ನಗರಗಳಿಗೆ ಹೌತಿಗಳು ಸರಣಿ ಕ್ಷ್ಪಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ್ದಾರೆ. ಒಟ್ಟು 7 ಡ್ರೋನ್ ಗಳು, 4 ಕ್ರೂಯಿಸ್ ಕ್ಷಿಪಣಿಗಳು ಹಾಗೂ 3 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿ ದಾಳಿ ನಡೆಸಲಾಗಿದೆ.
ರಿಯಾದ್, ಹೋಫುಫ್, ವಾದಿ ದವಾಸಿರ್, ದಹ್ರಾನ್, ಖಮೀಸ್ ಮುಷೈತ್ ಹಾಗೂ ಅಲ್ ಖರ್ಜ್ ನಗರಗಳ ಮೇಲೆ ದಾಳಿ ನಡೆಸಲಾಗಿದ್ದು, ಎಲ್ಲಾ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಸೌದಿ ಸೇನೆ ಹೇಳಿದೆ.
ಏತನ್ಮದ್ಯೆ ರಿಯಾದ್ ಪರಿಸರದಲ್ಲಿ ಕ್ಷಿಪಣಿ ಅವಶೇಷಗಳು ಬಿದ್ದು ನಾಲ್ವರಿಗೆ ಗಾಯಗಳಾಗಿವೆ. ಗಾಯಾಳುಗಳಲ್ಲಿ ಒಂದು ಮಗು, ಇಬ್ಬರು ಸ್ತ್ರೀಗಳು ಸೇರಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.