ಜೆದ್ದಾ(www.vknews.in): ಉಮ್ರಾ ಯಾತ್ರೆಗಾಗಿ ಅಬುದಾಬಿಯಿಂದ ಮಕ್ಕಾಗೆ ಉತ್ತರ ಪ್ರದೇಶ ಮೂಲದ ಕುಟುಂಬ ಪ್ರಯಾಣಿಸುತ್ತಿದ್ದ ವಾಹನವು ಸೌದಿ ಅರೇಬಿಯಾದ ತಾಯಿಫ್ ಸಮೀಪದ ಝುಲಮ್ ಎಂಬಲ್ಲಿ ಅಪಘಾತಕ್ಕೀಡಾಗಿದ್ದು, ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತರಾಗಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಮೊಹಮ್ಮದ್ ಗುಲಾಮ್ ಹಾಗೂ ಅವರ ಕುಟುಂಬ ಪ್ರಯಾಣಿಸುತ್ತಿದ್ದ ವಾಹನವು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿದ್ದ ಮೊಹಮ್ಮದ್ ಅಲಿ ಗುಲಾಮ್ ರವರ ತಂದೆ ಗುಲಾಮ್ ಅಲಿ ಶೇಖ್ ಹಾಗೂ ತಾಯಿ ಮುನೀ ಬೇಗಮ್ ಮೃತಪಟ್ಟಿದ್ದಾರೆ. ಮೊಹಮ್ಮದ್ ಗುಲಾಮ್ ಹಾಗೂ ಅವರ ಪತ್ನಿ ತೀವೃವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.