(www.vknews.in) : ರಾಜ್ಯದಲ್ಲಿ ಏನೇ ಮಾಡಿದರೂ, ಮುಸ್ಲಿಂ ಸಮುದಾಯವನ್ನು ಎಸೆಯುವಂತಹ, ಮುಸ್ಲಿಂ ಸಮುದಾಯವನ್ನು ದಾಳವಾಗಿಸಿಕೊಳ್ಳುವಂತಹ ರಾಜಕೀಯ ಬೇಡ. ಶಿವಾಜಿನಗರದ ಶಾಸಕ ಹಾಗೂ ಸಚಿವರಾದ ರಿಜ್ವಾನ್ ಅರ್ಷದ್ ರವರ ಹೇಳಿಕೆ ಮುಸ್ಲಿಂ ಸಮುದಾಯಕ್ಕೆ ತೀವ್ರ ಕೆಂಗೆಟ್ಟಿಗೆ ಗುರಿಯಾಗಿದೆ. ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಮಾತನಾಡುವಾಗ ಮುಸ್ಲಿಂ ಸಮುದಾಯದ ಬಗ್ಗೆ ಅಧ್ಯಯನ ಮಾಡಿ, ಇತಿಹಾಸ ತಿಳಿದು ಮಾತನಾಡಬೇಕು.
ಇಸ್ಲಾಂ ಧರ್ಮ ಯಾವುದೇ ಜಾತಿ, ಯಾವುದೇ ಕುಲದಿಂದ ಬಂದದ್ದಲ್ಲ. ಅದು ಈಮಾನದ ಧರ್ಮ, ತೌಹೀದ್ ನ ಧರ್ಮ. ಮುಸ್ಲಿಮರೆಲ್ಲರೂ ಹಿಂದಿನ ದಲಿತರೇ ಎಂದು ಹೇಳುವುದು ಕುರಾನ್ ಮತ್ತು ಹದೀಸ್ ಗೆ ವಿರುದ್ಧವಾದ ಮಾತು. ಇದು ಇಡೀ ಮುಸ್ಲಿಂ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತರುವ ಹೇಳಿಕೆ.
ನೀವು ಮಂತ್ರಿ ಎಂದು ಯಾವುದೋ ಮಾತಾಡಲು ಹೋಗಿ ಯಾವುದೋ ಮಾತಾಡುವುದು ಸರಿ ಕಾಣುವುದಿಲ್ಲ. ನಿಮ್ಮ ರಾಜಕೀಯವನ್ನು ಶಿವಾಜಿನಗರದಲ್ಲಿ ಇಟ್ಕೊಳ್ಳಿ. ಇಡೀ ಸಮುದಾಯವನ್ನು ಎಲ್ಲೆಡೆ ಎಳೆದು ತಂದು ನಿಮ್ಮ ರಾಜಕೀಯ ಪ್ರಯೋಗ ಶಾಲೆಯನ್ನಾಗಿ ಮಾಡುವುದು ಸರಿಯಲ್ಲ.
ಮುಸ್ಲಿಂ ಸಮುದಾಯದ ಮತ ಪಡೆದು, ಅದೇ ಸಮುದಾಯದ ಅಸ್ತಿತ್ವದ ಬಗ್ಗೆ, ನಂಬಿಕೆಯ ಬಗ್ಗೆ ಪ್ರಶ್ನೆ ಮಾಡುವುದು ಸರಿಯಲ್ಲ. ಇದು ನಾಲಿಗೆ ಮೇಲಿನ ಹಿಡಿತ ತಪ್ಪಿದ ಹೇಳಿಕೆ. ಮುಸ್ಲಿಮರು ಇಸ್ಲಾಂ ಧರ್ಮ ನಿನ್ನ ರಾಜಕೀಯ ಪ್ರಯೋಗ ಶಾಲೆಯಲ್ಲ! ನಾಲಿಗೆ ಮೇಲೆ ಹಿಡಿತ ಇರಲಿ! ಮುಸ್ಲಿಮರ ಸ್ವಾಭಿಮಾನಕ್ಕೆ ಸವಾಲು ಹಾಕಬೇಡಿ! ಇಂತಹ ಹೇಳಿಕೆಗಳನ್ನು ಮುಸ್ಲಿಂ ಸಮುದಾಯ ಎಂದಿಗೂ ಸಹಿಸುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ರಿಯಾಝ್ ಹರೇಕಳ ಅವರು ತೀವ್ರವಾಗಿ ಖಂಡಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.