(www.vknews.in): ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ 30 – ವಿಷನ್ ಅಂಗವಾಗಿ ಮುಡಿಪುವಿನಲ್ಲಿ ವಿಶ್ವ ವಿದ್ಯಾಲಯಕ್ಕೆ ಹೆಚ್ಚಿನ ಪ್ರೇರಣೆ ನೀಡಿ ಶೈಕ್ಷಣಿಕ ಕ್ರಾಂತಿಯ ಮೂಲಕ ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ಮುಂದಿನ ಜನಾಂಗಕ್ಕೆ ಬೇಕಾದ ಎಲ್ಲ ರೀತಿಯ ಸೌಕರ್ಯ ಸೌಲಭ್ಯ ಗಳನ್ನು ನೀಡಿ ಅವರನ್ನು ಪ್ರಜ್ಞಾವಂತ ರಾಗಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ ಎಂದು ಡಿಕೆಯಸ್ಸಿ ವಿಷನರಿ ಮುಖ್ಯಸ್ಥರೂ ಅಲ್ ಮುಝೈನ್ ಆಡಳಿತಾಧಿಕಾರಿಯೂ ಆದ ಹಾಜಿ ಝಕರಿಯ್ಯ ಜೋಕಟ್ಟೆ ನುಡಿದರು.
ಅವರು ಡಿಕೆಯಸ್ಸಿ ದಮ್ಮಾಂ ಝೋನ್ 12, ನವೆಂಬರ್ 2026 ಗುರುವಾರ ದಮ್ಮಾಂ ನಲ್ಲಿ ಹಮ್ಮಿಕೊಂಡಿದ್ದ ಫ್ಯಾಮಿಲಿ ಮುಲಾಖಾತ್ 2026 ರ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಡಿಕೆಯಸ್ಸಿ ಕಳೆದ 3 ದಶಕಗಳಿಂದ ಸಮುದಾಯದ ಸಮಾಜದ ಹಿಂದುಳಿದ ಬಡ ಕುಟುಂಬದ ಸದಸ್ಯರ ಮಕ್ಕಳಿಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಸಂಸ್ಥೆಯ ಮೂಲಕ ಕಾರ್ಯಪ್ರವರ್ತನೆ ಗೈಯ್ಯುತ್ತಿದ್ದು ಮುಂಬರುವ ವರ್ಷಗಳಲ್ಲಿ ಮುಡಿಪುವಿನಲ್ಲಿ 30 ಎಕರೆ ಜಾಗದಲ್ಲಿ ಬೃಹತ್ ವಿದ್ಯಾಲಯ ಸ್ಥಾಪಿಸುವ ಮೂಲಕ ತನ್ನ ಕಾರ್ಯಕ್ಷೇತ್ರವನ್ನು ಮುಂದುವರಿಸಿ ಮುಂದಿನ ಪೀಳಿಗೆಗೆ ಸಹಕಾರಿಯಾಗುವ ಇರಾದೆಯನ್ನು ಡಿಕೆಯಸ್ಸಿ ಕಂಡು ಹಿಡಿಯುವ ಮುಂದಾಲೋಚನೆಯಲ್ಲಿದೆ.
ಡಿಕೆಯಸ್ಸಿ ಸೆಂಟ್ರಲ್ ಆರ್ಗನೈಝರ್ ಉಸ್ತಾದ್ ಅಬ್ದುರ್ರಶೀದ್ ಸಅದಿ ದುಆ ಗೈದರು. ಅಧ್ಯಕ್ಷ ಸ್ಥಾನ ವಹಿಸಿದ್ದ ಮುಲಾಖಾತ್ ಚೆಯರ್ಮ್ಯಾನ್ ಕೆ.ಎಚ್. ಮುಹಮ್ಮದ್ ರಫೀಖ್ ಸೂರಿಂಜೆ ಆಗಮಿಸಿದ ಮುಖ್ಯ ಅತಿಥಿಗಳನ್ನು ಪ್ರೇಕ್ಷಕರನ್ನು ಮುಖ್ತಕಂಠದಿಂದ ಸ್ವಾಗತಿಸಿದರು. ಇಸ್ಮಾಯೀಲ್ ಕಾಟಿಪಳ್ಳ ಪವಿತ್ರ ಖುರ್ಆನ್ ಪಠಿಸಿ ಕನ್ನಡ ಭಾಷೆಯಲ್ಲಿ ಅನುವಾದಿಸಿದರು.
ಮುಖ್ಯ ಅತಿಥಿಗಳಾಗಿ ಸಊದ್ ಅಲ್ ಹರ್ಬಿ, ಈಸಾ ಅಲ್ ಹಮ್ದಾನ್, ಶರೀಫ್ ಅಲ್ ಮುಝೈನ್, ಅಬ್ದುಲ್ ಹಮೀದ್ ಅಸ್ಕಾಫ್ , ನಝೀರ್ ಅಲ್ ಫಲಾಹ್, ಮುಬೀನ್ ಟೇಬಲ್ ಫೋರ್, ಇಮ್ರಾನ್ ಬಂದರ್ ಸಾನಿವೇಟ್,ಯೂನುಸ್ ಸ್ಯಾಂಡ್ ಟೆಕ್, ರಝೀಂ ಎಕ್ಸೊಲೆನ್, ಬಶೀರ್ ಅಲ್ ಫಲಕ್, ಅಹ್ಮದ್ ಹುಸೈನ್ ಪಡುಬಿದ್ರಿ, ಇಸ್ಮಾಯೀಲ್ ಝಕರಿಯ್ಯ ಪೂಕಾಕ ಬಾರ್ಕೊ, ಶಬೀರ್ ಎಂಪ್ಲಿಟ್ಯೂಡ್ , ಶರೀಫ್ ಬಜ್ಪೆ, ಡಿಕೆಯಸ್ಸಿ ವಿಷನ್ 30 ಚೆಯರ್ಮ್ಯಾನ್ ಹಾತಿಂ ಕೂಳೂರು, ಡಿಕೆಯಸ್ಸಿ ಕೇಂದ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಮೂಳೂರು, ಅಬ್ದುಲ್ ಅಝೀಝ್ ಆತೂರು, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕಣ್ಣಂಗಾರ್, ರಿಯಾದ್ ನಿಂದ ಅಬ್ದುಲ್ ಅಝೀಝ್ ಬಜ್ಪೆ, ದಮ್ಮಾಂ ಝೋನ್ ಅಧ್ಯಕ್ಷ ಅಶ್ರಫ್ ನಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದ ಮೊದಲು ಮಕ್ಕಳಿಗಾಗಿ ಖಿರಾಅತ್,ಮದ್ಹ್, ಭಾಷಣ, ಡ್ರಾಯಿಂಗ್ ಮತ್ತು ಆಟೋಟ ಸ್ಫರ್ಧೆಗಳನ್ನು ಏರ್ಪಡಿಸಲಾಗಿ ಅತ್ಯಾಕರ್ಷಕ ಬಹುಮಾನ ಗಳನ್ನು ನೀಡಲಾಯಿತು.
ಮಕ್ಕಾ ವಲಯ, ರಿಯಾದ್ ವಲಯ ಹಾಗೂ ದಮ್ಮಾಂ ವಲಯಕ್ಕೊಳಪಟ್ಟ ಹಫರ್ ಅಲ್ ಬಾತಿನ್, ಅಲ್ ಹಸ್ಸ, ಜುಬೈಲ್, ದಮ್ಮಾಂ, ತುಖ್ಬ, ಅಲ್ ಖೋಬರ್, ಯೂತ್ ವಿಂಗ್ ಜುಬೈಲ್ ಕಾರ್ಯ ಕರ್ತರು ಸಮಾರಂಭದ ಯಶಸ್ವಿಗೆ ಕಾರಣ ಕರ್ತರಾದರು. ಇಖ್ಬಾಲ್ ಮಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಅಲೀ ಅಲ್ ಮುಝೈನ್ ವಂದನಾರ್ಪಣೆ ಗೈದರು.
ಇದೆ ಸಂಧರ್ಭದಲ್ಲಿ DKSC ಭವಿಷ್ಯದ ಯೋಜನೆಗಳ ಒಂದು ಡಾಕ್ಯುಮೆಂಟರಿಯನ್ನು ಸಭೆಯಲ್ಲಿ ಪ್ರದರ್ಶಿಸಲಾಯಿತು . ಡಾಕ್ಯುಮೆಂಟರಿ ಕೃರ್ತರಾದ ಮೊಹಿದೀನ್ ನಾಝಿಮ್ ರವರನ್ನು ಸಭೆಯಲ್ಲಿ ಗೌರವಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.