(www.vknews.com) : ಕೋವಿಡ್ – 19 ಜಾಗತಿಕ ಕೊರೋನ ವೈರಸ್ ನಿಂದಾಗಿ ವಿಶ್ವವೇ ಬೆಚ್ಚಿಬಿದ್ದಿರುವಂತಹಾ ಸಂಧರ್ಭದಲ್ಲಿ ವೈರಸನ್ನು ತಡೆಗಟ್ಟಲು ದೇಶವ್ಯಾಪಿ ಲಾಕ್ ಡೌನ್ ಜಾರಿಯಲ್ಲಿದೆ, ಅಲ್ಲದೇ ದಕ್ಷಿಣಕನ್ನಡ ಜಿಲ್ಲೆಯನ್ನು ರೆಡ್ ಝೋನ್ ಎಂದು ಪರಿಗಣಿಸಲಾಗಿದ್ದರೂ ಲಾಕ್ ಡೌನನ್ನು ಸಡಿಲಗೊಳಿಸಿ ಸಾರಾಯಿ ಅಂಗಡಿಗಳು ಹಾಗೂ ಬಟ್ಟೆಯಂಗಡಿಗಳನ್ನು ತೆರೆಯಲು ಅನುಮತಿಯನ್ನು ನೀಡುವ ಮುಖಾಂತರ ದಕ್ಷಿಣಕನ್ನಡ ಜಿಲ್ಲೆಯನ್ನು ಮರಣ ಮೃದಂಗಕ್ಕೆ ಜಿಲ್ಲಾಡಳಿತ ಸಜ್ಜುಗೊಳಿಸುತ್ತಿರುವಂತೆ ತೋರುತ್ತಿದೆ.
ಜಿಲ್ಲಾಡಳಿತವು ಕೋವಿಡ್ ನಿಗ್ರಹ ದಳ ಹಾಗೂ ಇನ್ನಿತರ ದಳಗಳನ್ನು ರಚನೆ ಮಾಡಿದ್ದರೂ ಎಲ್ಲವೂ ನಾಮಕಾವಸ್ಥೆಗೆ ಮಾತ್ರವಾಗಿದೆ ಎಂಬುವುದು ಜಿಲ್ಲೆಯ ಹೃದಯ ಭಾಗವಾದ ಮಂಗಳೂರಿನ ಪೇಟೆಗಳನ್ನು ನೋಡಿದಾಗ ಅರ್ಥೈಸಬಹುದಾಗಿದೆ.
ಲಾಕ್ ಡೌನ್ ಆದೇಶವು ಸಡಿಲಗೊಳ್ಳುತ್ತಿದ್ದಂತೆ ಮಂಗಳೂರು ನಗರದಲ್ಲಿ ಹಿಂದಿಗಿಂತಲೂ ಹೆಚ್ಚಿದ ವಿಪರೀತ ವಾಹನ ದಟ್ಟನೆ ಹಾಗೂ ಪ್ರತೀಯೊಂದು ಅಂಗಡಿ ಮುಂಗಟ್ಟುಗಳ ಮುಂದೆ ಹಾಗೂ ವೈನ್ ಶಾಪ್ ಗಳ ಮುಂದೆ ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಮುಗಿಬೀಳುತ್ತಿರುವ ಜನದಟ್ಟನೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗುತ್ತಿರುವುದನ್ನು ಗಮನಿಸಿದರೆ ಜಿಲ್ಲಾಡಳಿತವು ಕೊರೋನವೆಂಬ ಮಹಾ ಮಾರಿಯನ್ನು ದಕ್ಷಿಣಕನ್ನಡ ಜಿಲ್ಲೆಗೆ ಆಹ್ವಾನಿಸುತ್ತಿರುವಂತಿದೆ.
ದಕ್ಷಿಣಕನ್ನಡ ಜಿಲ್ಲಾಡಳಿತವು ಕೂಡಲೇ ಎಚ್ಚೆತ್ತು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳದೇ ಹೋದರೆ ಮುಂದೆ ಬರಲಿರುವ ಅನಾಹುತಗಳಿಗೆ ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾದೀತು ಎಂದು ಅಖಿಲ ಭಾರತ ಮುಸ್ಲಿಂ ಡೆವಲಪ್ಮೆಂಟ್ ಫಾರಂ ಇದರ ರಾಜ್ಯ ಉಪಾಧ್ಯಕ್ಷರಾದ ಎಸ್.ಅಬೂಬಕ್ಕರ್ ಸಜೀಪ ಎಚ್ಚರಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.