(www.vknews.com) :
ಮಂಜಿನೊಂದಿಗೆ ಚೆಲ್ಲಾಟವಾಡುತ್ತಾ ಭೂರಮೆಗೆ ಹೊಳಪನ್ನು ನೀಡುತ್ತಾ ಅಸ್ತಮಿಸುವ ಸೂರ್ಯನು ಕೆಂಪಾದ ನನ್ನವನ ಪ್ರೀತಿಯನು ಕಂಡು !
ಪ್ರಿಯತಮನ ಬರವನ್ನು ಕಾಯುತ್ತಾ ತೋಳಲಿ ಬಂಧಿಯಾಗಲು ಆಶಿಸುತ ಹಠಮಾಡುತ್ತಿದ್ದ ಮೊಗ್ಗೂ ಅರಳಿತು ನನ್ನವನ ಪ್ರೀತಿಯನು ಕಂಡು !
ಮಾವಿನ ಮರವೊಂದರ ತಪ್ಪಲಿನಲ್ಲಿ ಮಂಜು ಮುಸುಕಿದ ಮುಂಜಾವಿನಲಿ ಇನಿಯನ ಕಾದಿರುವ ಕೋಗಿಲೆ ಹಾಡಿತು ನನ್ನವನ ಪ್ರೀತಿಯನು ಕಂಡು !
ನನ್ನವನ ಪ್ರೀತಿ ಕಂಡು ಚಂದಿರ ಇನ್ನಷ್ಟು ಮಿರುಗುವನು ಶಾಶ್ವತವಾಗಿ ಹೀಗಿರಲಿ ನನ್ನ ಪ್ರೀತಿಸುತ ನನ್ನವನು !!
~ ರಫ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.