(www.vknews.in) ; ರಾಜ್ಯದ ವಿವಿದೆಡೆಗಳಲ್ಲಿ ASP ಯಾಗಿಯೂ, SP ಯಾಗಿಯೂ ಪೋಲಿಸ್ ಕಮಿಷನರ್ ರಾಗಿಯೂ ವಿಜೃಂಭಿಸಿ ಪೋಲಿಸ್ ಇಲಾಖೆಯ ಇತಿಹಾಸದಲ್ಲಿ ಒಂದು ಅತ್ಯುನ್ನತ ಅಧ್ಯಾಯವನ್ನು ಬರೆದ ಮಂಗಳೂರು ಪೋಲಿಸ್ ಕಮಿಷನರ್ ಶ್ರೀ ಅನುಪಂ ಅಗರ್ವಾಲ್ ಮಂಗಳೂರು ಕಮಿಷನರ್ ವ್ಯಾಪ್ತಿಯ ಜನತೆಯ ಮನ ಮಂದಿರಗಳಲ್ಲಿ ಬೆಳಗಿ ಬಂದಿದ್ದಾರೆ. 11 ತಿಂಗಳ ಹಿಂದೆ ಆಗಮಿಸಿದ ಶ್ರೀ ಅನುಪಂ ಅಗರ್ವಾಲ್ ಆಗಮನದ ನಂತರ ಮಂಗಳೂರು ನಗರದಾದ್ಯಂತ ಠಿಕಾಣಿ ಹೂಡಿದ್ದ ಗ್ಯಾಂಗ್ ವಾರ್ ಗಳು, ಭೂಗತ ದೊರೆಗಳು, ಕಳ್ಳಕಾಕರು, ದರೋಡೆಕೋರರು, ಕೋಮುವಾದಿಗಳು, ಕಳ್ಳಸಾಗಣಿದಾರರು, ವೇಶ್ಯಾ ಜಾಲಗಳು ಮುಂತಾದ ಸಕಲ ಸಮಾಜ ಬಾಹಿರ ವ್ಯಕ್ತಿಗಳು ಮಂಗಳೂರು ನಗರ ಬಿಟ್ಟು ಪಲಾಯನ ಗೈದಿದ್ದಾರೆ.
ಮಂಗಳೂರು ನಗರದ ಇತಿಹಾಸದಲ್ಲೇ ಕಮಿಷನರ್ ಅನುಪಂ ಅಗರ್ವಾಲ್ ಮಾಡಿದ ಪರಿವರ್ತನೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ತಮ್ಮ ಅಧೀನದಲ್ಲಿ ಸಮರ್ಥ ಪೋಲಿಸ್ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ನೇಮಿಸಿಕೊಂಡು ಅವರಿಂದ ಸಮರ್ಥ ಸೇವೆ ಮಾಡಿಸಿ ಮಂಗಳೂರು ನಗರದಲ್ಲಿ ನಿಭೀ೯ತಿಯ ವಾತಾವರಣ ನಿಮಾ೯ಣ ಮಾಡಿದ ಶ್ರೀ ಅನುಪಂ ಅಗರ್ವಾಲ್ ನಗರದಾದ್ಯಂತ ಸರ್ವ ಜನಾಧರಣೀಯವಾಗಿ ಮೆಚ್ಚುಗೆ ಗಳಿಸಿ ಕೊಂಡಾಡಲ್ಪಟ್ಟಿದ್ದಾರೆ. ದಿಟ್ಟೆದೆಯ ಪೋಲಿಸ್ ಅಧಿಕಾರಿ ಗಳನ್ನು, ಸಿಬ್ಬಂದಿಗಳನ್ನು ಸಂಯೋಜಿಸಿ ರಚಿಸಿದ ನಗರ ಅಪರಾಧ ಪತ್ತೇದಳ (CCB) ದರೋಡೆ ಕೋರರಿಗೆ ಸಿಂಹ ಸ್ವಪ್ನವಾಗಿ ಪರಿಣಮಿಸಿದ್ದಲ್ಲದೆ ದರೋಡೆ-ಪುಂಡಾಟಿಕೆ, ಕಳ್ಳತನ, ಗ್ಯಾಂಗ್ವಾರ್, ಮಾದಕ ವಸ್ತು (ಡ್ರಗ್ಸ್) ಮುಂತಾದ ಅಪರಾಧಗಳನ್ನು ಪತ್ತೆ ಹಚ್ಚಲು CCB ಯಶಸ್ವಿಯಾಗಿದೆ.
ಶ್ರೀ ಅನುಪಂ ಅಗರ್ವಾಲ್ ರವರ ಮಹತ್ಪಾದನೆಗೆ ಇಲಾಖಾ ವರಿಷ್ಠರು ಸಂತೃಪ್ತಿ ವ್ಯಕ್ತ ಪಡಿಸಿದ್ದಾರೆ. ಇದು ಅಗರ್ವಾಲ್ ರವರ ದಕ್ಷ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ. ಧೀಮಂತ ಪೋಲಿಸ್ ಕಮಿಷನರ್ ಶ್ರೀ ಅನುಪಂ ಅಗರ್ವಾಲ್ ರವರ ಜನಪ್ರಿಯತೆಯನ್ನು ಕಂಡು ಸಹಿಸದ ಕೆಲವು ದುಷ್ಟರು, ಸಮಾಜ ಘಾತುಕರು ಅವರನ್ನು ಮಂಗಳೂರು ಕಮಿಷನರ್ ಹುದ್ದೆಯಿಂದ ಎತ್ತಂಗಡಿ ಮಾಡಿಸಲು ವಿಫಲ ಪ್ರಯತ್ನ ಮಾಡಿದರೂ ಇದನ್ನು ಲೆಕ್ಕಿಸದೆ ಕರ್ತವ್ಯವೇ ತನ್ನ ಪರಮ ಧರ್ಮ ಎಂಬ ದೃಢ ವಿಶ್ವಾಸದಿಂದ ಮಂಗಳೂರು ನಗರದ ಹಿತಕ್ಕಾಗಿ ಹೋರಾಡುತ್ತಿರುವ ಕಮಿಷನರ್ ಶ್ರೀ ಅನುಪಂ ಅಗರ್ವಾಲ್ ಮಂಗಳೂರು ನಗರ ಪೋಲಿಸ್ ಇಲಾಖೆಯಲ್ಲಿ ಮಹತ್ತರ ಪರಿವರ್ತನೆಗೆ ನಾಂದಿಯಾಗಲಿದ್ದಾರೆ.
ಶೇಖ್ ಇಸಾಕ್ ಸಂಪಾದಕರು ಕಾಕೋ೯ಟಕ ಸಾಪ್ತಾಹಿಕ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.