ರಮೀಝ್ ಕಾಪು ಪ್ರಥಮ ಹಾಗು ಇಮ್ರಾನ್ ಕುಪ್ಪೆಟ್ಟಿ ದ್ವೀತೀಯ
ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಫೆಸ್ರ ಮೀಡಿಯಾ ಆಯೋಜಿಸಿದ ಅರೇಬಿಕ್ ಕ್ಯಾಲಿಗ್ರಫಿ ಸ್ಪರ್ಧೆಯು ಕೊನೆಗೊಂಡಿದ್ದು, ವಿಜಯಿಗಳ ಘೋಷಣೆಯಾಗಿದೆ. ಪ್ರಥಮ ಸ್ಥಾನವನ್ನು ರಮೀಝ್ ಕಾಪು ಹಾಗು ದ್ವೀತೀಯ ಸ್ಥಾನವನ್ನು ಇಮ್ರಾನ್ ಕುಪ್ಪೆಟ್ಟಿ ತಮ್ಮದಾಗಿಸಿಕೊಂಡಿದ್ದಾರೆ.
ಪ್ರಥಮ ಸ್ಥಾನ ಪಡೆದ ವೀಡಿಯೋ…
ದ್ವಿತೀಯ ಸ್ಥಾನ ಪಡೆದ ವೀಡಿಯೋ…
106 ಸ್ಪರ್ಧಾರ್ಥಿಗಳು ಭಾಗವಹಿಸಿದ್ದ ಸ್ಪರ್ಧೆಯು ಬಹಳ ಪೈಪೋಟಿಯಿಂದ ಕೂಡಿತ್ತು. ಎಲ್ಲಾ ಸ್ಪರ್ಧಾರ್ಥಿಗಳು ತುಂಬಾ ಉತ್ತಮವಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಮೊದಲ ಹತ್ತು ಸ್ಥಾನದಲ್ಲಿರುವ ಸ್ಪರ್ಧಿಗಳ ವಿವರವನ್ನು ಕೆಳಗೆ ನೀಡಲಾಗಿದೆ.
ತೀರ್ಪುಗಾರರಾಗಿ ಅಶ್ರಫ್ ಸಖಾಫಿ ಕುರ್ನಾಡ್, ಅಬ್ದುಲ್ ಸಮದ್ ಎಸ್ಸಾರ್ ಗ್ರಾಫಿಕ್ಸ್, ತನ್ಸಿಫ್ ಬಿ.ಎಮ್. ಕಿಲ್ಲೂರ್ ಸಹಕರಿಸಿದರು.
ವಿಜೇತರಿಗೆ ಅಭಿನಂದನೆಗಳನ್ನು, ಭಾಗವಹಿಸಿದ ಸರ್ವ ಸ್ಪರ್ಧಾರ್ಥಿಗಳಿಗೂ ಧನ್ಯವಾದವನ್ನು, ತೀರ್ಪುಗಾರರಿಗೂ ಹಾಗು ಮಾಧ್ಯಮ ಸಹಕಾರ ನೀಡಿದ ವಿಶ್ವ ಕನ್ನಡಿಗ ನ್ಯೂಸ್ ಬಳಗಕ್ಕೂ ಕೃತಜ್ಞತೆಯನ್ನು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.