ಜೆದ್ದಾ(www.vknews.in): ಕೊರೊನಾ ವೈರಸ್ ಭೀತಿಯಿಂದ ಸೌದಿ ಅರೇಬಿಯಾ, ಯುಎಇ, ಬಹರೈನ್, ಕತಾರ್, ಕುವೈತ್, ಒಮಾನ್ ಮುಂತಾದ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆತರುವ ಪ್ರಯತ್ನಗಳು ನಡೆಯುತ್ತಿದೆ. ಭಾರತೀಯ ನೌಕಾ ಪಡೆಯ ಅತ್ಯಂತ ಸುಸಜ್ಜಿತ ನೌಕೆಯಾದ ಐಎನ್ಎಸ್ ಜಲಶ್ವಾ ಹಾಗೂ ಇನ್ನಿತರ ಎರಡು ಅತ್ಯಾಧುನಿಕ ನೌಕೆಗಳು ಸರ್ವ ರೀತಿಯಲ್ಲಿ ಸಜ್ಜಾಗಿ ನಿಂತಿದೆೆ. ಮೇ 3ರ ನಂತರ ಈ ನೌಕೆಗಳು ಭಾರತೀಯರನ್ನು ಕರೆತರಲು ಕೊಲ್ಲಿ ರಾಷ್ಟ್ರಗಳಿಗೆ ಪ್ರಯಾಣಿಸುವ ಸಾಧ್ಯತೆಯಿದೆೆ. ಐಎನ್ಎಸ್ ಜಲಶ್ವಾ ಸೇರಿದಂತೆ ಒಟ್ಟು ಮೂರು ನೌಕಾದಳದ ನೌಕೆಗಳು ಪ್ರತಿಯೊಂದು ಸರಿಸುಮಾರು 2000 ಜನರನ್ನು ಕರೆತರುವ ಸಾಮರ್ಥವನ್ನು ಹೊಂದಿದೆ. ಅದಲ್ಲದೇ ಇವುಗಳಲ್ಲಿ ಆಹಾರ ಸಾಮಾಗ್ರಿಗಳು, ಔಷಧಿ ಸಾಮಾಗ್ರಿಗಳನ್ನು ಈಗಾಗಲೇ ಸಂಗ್ರಹಿಸಡಲಾಗಿದೆ. ಸೆನಿಟೈಸೇಷನ್ ಹಾಗೂ ಸಾಮಾಜಿಕ ಅಂತರವನ್ನು ಪಾಲಿಸುವ ಕ್ರಮಗಳನ್ನೂ ಕೂಡ ಈ ನೌಕೆಗಳಲ್ಲಿ ಅಳವಡಿಸಲಾಗಿದೆ. ವೈರಸ್ ಸೋಂಕಿತರನ್ನು ಪ್ರತ್ಯೇಕವಾಗಿ ಕ್ವಾರೆಂಟೈನ್ ನಲ್ಲಿಡುವ ವ್ಯವಸ್ಥೆ ಇದರಲ್ಲಿದೆ ಎಂದು ಐಎಎನ್ಎಸ್ ವರದಿ ಮಾಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.