ಬೆಂಗಳೂರು (www.vknews.com) : COVID-19 ಸಾಂಕ್ರಾಮಿಕ, ತಂತ್ರಜ್ಞಾನ ಸಲಹಾ ಸಂಸ್ಥೆ, ಸಿನರ್ಜಿ ಸ್ಟ್ರಾಟೆಜಿಕ್ ಸೊಲ್ಯೂಷನ್ಸ್ , ಸೊಂಕು ಹರಡುವಿಕೆಯನ್ನು ತಡೆಗಟ್ಟುವಲ್ಲಿ ಮುಂಚೂಣಿ ಯಲ್ಲಿರುವ ಪೌರಕಾರ್ಮಿಕರು ಮತ್ತು ಪೊಲೀಸ್ ಸಿಬ್ಬಂದಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇಂದು 25,000 ಮರುಬಳಕೆ ಮಾಡಬಹುದಾದ ಮಾಸ್ಕ್ ಗಳನ್ನು (ಮುಖಗವಸುಗಳನ್ನು) ಮತ್ತು 300 ಲೀಟರ್ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ನೀಡಿದೆ. ಪೌರಕಾರ್ಮಿಕರು ಮತ್ತು ಪೊಲೀಸ್ ಸಿಬ್ಬಂದಿ ಯೋಧರನ್ನು ಮಾರಣಾಂತಿಕ ವೈರಸ್ನಿಂದ ರಕ್ಷಿಸಲು ಕೊಡಗು, ಮೈಸೂರು ಮತ್ತು ಬೆಂಗಳೂರಿನಲ್ಲಿ ಬಳಸಲು ನೀಡಲಾಗಿದೆ. ಕಾರ್ಮಿಕ ದಿನಾಚರಣೆಯ ಪ್ರಯುಕ್ತವಾಗಿ, ವೈರಸ್ ಸೊಂಕು ದಾಳಿಯಿಂದ ನಾಗರಿಕರನ್ನು ರಕ್ಷಿಸುವಲ್ಲಿ ಮುಂಚೂಣಿಯಲ್ಲಿರುವ ಯೋಧರ ಅನುಕೂಲಕ್ಕಾಗಿ ಮಾಸ್ಕ್ ಗಳನ್ನು (ಮುಖಗವಸುಗಳನ್ನು) ಮತ್ತು ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಗೌರವಾನ್ವಿತ ವಸತಿ ಸಚಿವ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ವಿ. ಸೋಮಣ್ಣ, ಅವರಿಗೆ ಹಾಗೂ ಗೌರವಾನ್ವಿತ ಸಹಕಾರ ಮತ್ತು ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಎಸ್. ಟಿ. ಸೋಮಶೇಖರ್ ಮತ್ತು ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಗೂ ಹಸ್ತಾಂತರಿಸಿದೆ.
ಉಪಕ್ರಮದ ಕುರಿತು ಮಾತನಾಡಿದ ಸಿನರ್ಜಿ ಸ್ಟ್ರಾಟೆಜಿಕ್ ಸೊಲ್ಯೂಷನ್ಸ್ನ ಸ್ಥಾಪಕ ಮತ್ತು ಸಿಇಒ ಪ್ರದೀಪ್ ಸತ್ಯ, “ಈ ಮುಂಚೂಣಿಯಲ್ಲಿರುವ ಕಾರ್ಯಪಡೆಯು ಮಾರಣಾಂತಿಕ ಕರೋನವೈರಸ್ ವಿರುದ್ಧ ಕೆಚ್ಚೆದೆಯಿಂದ ಹೋರಾಡುತ್ತಿದ್ದಾರೆ. ಮತ್ತು ನಾವೆಲ್ಲರೂ ಸುರಕ್ಷಿತವಾಗಿರಲು ನಮ್ಮ ಯೋಧರು ಅವರ ಕುಟುಂಬ ದೊಂದಿಗೆ ಕಳೆಯಬೇಕಾದ ಸಮಯವನ್ನು ನಮಗಾಗಿ ತ್ಯಾಗ ಮಾಡುತ್ತಿ ದ್ದಾರೆ. ಈ ಸಮಯದಲ್ಲಿ ಸೋಂಕು ತಡೆಗಟ್ಟುವಿಕೆಯ ಏಕೈಕ ಪರಿಹಾರಕವೆಂದರೇ (ಮಾಸ್ಕ್)ಮುಖವಾಡಗಳು, ಹ್ಯಾಂಡ್ ಸ್ಯಾನಿಟೈಜರ್ಗಳು ಮತ್ತು ಸೋಂಕುನಿವಾರಕಗಳು ವೈರಸ್ನಿಂದ ರಕ್ಷಿಸಿಕೊಳ್ಳಲು ಲಭ್ಯವಿರುವ ಏಕೈಕ ರಕ್ಷಣಾ ಉಪಕರಣಗಳಾಗಿವೆ. ಕಾರ್ಮಿಕ ದಿನದಂದು, ನಾಗರಿಕರನ್ನು ಕಾಪಾಡುವಲ್ಲಿ ದಣಿವರಿಯದ ಈ ಯೋಧರ ನಿಸ್ವಾರ್ಥ ಸೇವೆಗಾಗಿ ನಾವು ಅವರಿಗೆ ನಮಸ್ಕರಿಸುತ್ತೇವೆ ” ಎಂದರು.
“ಈ ಅಗತ್ಯದ ಸಮಯದಲ್ಲಿ ಪ್ರತಿ ಸಂಸ್ಥೆಯು ಮುಂದೆ ಬಂದು ತಮ್ಮ ಸೇವೆಯನ್ನು ಮಾಡಲು ನಾನು ಪ್ರೋತ್ಸಾಹಿಸುತ್ತೇನೆ. ಕಾರ್ಪೊರೇಟ್ಗಳು, ವ್ಯಕ್ತಿಗಳು ಮತ್ತು ಸಮುದಾಯಗಳು ಒಗ್ಗೂಡಿ ವೈರಸ್ನ ಹರಡುವಿಕೆಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಸರ್ಕಾರವನ್ನು ಬೆಂಬಲಿಸುವ ಮಾರ್ಗಗಳನ್ನು ಕಂಡುಕೊಳ್ಳುವ ಸಮಯ ಇದಾಗಿದೆ ”ಎಂದು ಸಿನರ್ಜಿ ಸ್ಟ್ರಾಟೆಜಿಕ್ ಸೊಲ್ಯೂಷನ್ಸ್ನ ನಿರ್ದೇಶಕ ದಿಲೀಪ್ ಸತ್ಯ ಹೇಳಿದರು.
ಫೋಟೋ ವಿವರಣೆ:
ಕಾರ್ಮಿಕರ ದಿನಾಚರಣೆ ಪ್ರಯುಕ್ತ ಸಿನರ್ಜಿ ಸ್ಟ್ರಾಟೆಜಿಕ್ ಸೊಲ್ಯೂಷನ್ಸ್ನ ಸ್ಥಾಪಕ ಮತ್ತು ಸಿಇಒ ಪ್ರದೀಪ್ ಸತ್ಯ, (ಮಧ್ಯದಲ್ಲಿರುವವರು) ಅವರು ವೈರಸ್ ಸೊಂಕು ದಾಳಿಯಿಂದ ನಾಗರಿಕರನ್ನು ರಕ್ಷಿಸುತ್ತಿರುವ ಮುಂಚೂಣಿಯಲ್ಲಿರುವ ಯೋಧರ ಅನುಕೂಲಕ್ಕಾಗಿ ಮಾಸ್ಕ್ ಗಳನ್ನು (ಮುಖಗವಸುಗಳನ್ನು) ಮತ್ತು ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಶ್ರೀ ಹೇಮಂತ್ ನಿಂಬಾಳ್ಕರ್, ಐಜಿಪಿ ಮತ್ತು ಎಸಿಪಿ, ಬೆಂಗಳೂರು. ಇವರಿಗೆ ಹಸ್ತಾಂತರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.