ಮುಲ್ಕಿ (www.vknews.com) : ಆಪತ್ಭಾಂಧವ ಸೈಕೊ ರಿಹಾಬಿಲಿಟೇಶನ್ ಟ್ರಸ್ಟ್ (ರಿ) ಕಾರ್ನಾಡ್ ಮುಲ್ಕಿ. ಇದರ ವತಿಯಿಂದ ಲಡಾಕ್’ನ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ನಡುವಿನ ಘರ್ಷಣೆಯಲ್ಲಿ ಹುತಾತ್ಮರಾದ 20 ಭಾರತೀಯ ಯೋಧರಿಗೆ ಸಂಸ್ಥೆಯಲ್ಲಿ ಆಶ್ರಯ ಪಡೆದಿರುವ ವಿಶೇಷ ಅತಿಥಿಗಳೊಂದಿಗೆ ಸೇರಿ ದೀಪ ಬೆಳಗಿಸುವ ಮೂಲಕ ಹುತಾತ್ಮ ಯೋಧರನ್ನು ನೆನೆದು ಮೊಂಬತ್ತಿ ಬೆಳಗಿ ಯೋಧರ ಬಲಿದಾನಕ್ಕೆ ನಮನ ಸಲ್ಲಿಸಲಾಯಿತು.
ಗಡಿ ಭಾಗದ ಕಣಿವೆಯಲ್ಲಿ ಪಾಪಿ ಚೀನಾದ ಕಮ್ಯುನಿಸ್ಟ್ ಸೈನಿಕರು LAC ದಾಟಿ ಬಂದು ಭಾರತದ ವೀರ ಸೈನಿಕರೊಂದಿಗೆ ನಡೆಸಿದ ಚೀನಿಯರ ಕೃತ್ಯ ಖಂಡನೀಯ, ಆದ್ದರಿಂದ ನಮ್ಮೆಲ್ಲರ ರಕ್ಷಣೆಯಲ್ಲಿ ತೊಡಗಿಸಿ ಹುತ್ತಾತ್ಮರಾದ ಭಾರತೀಯ ಯೋಧರಿಗೆ ಶ್ರಧಾಂಜಲಿ ಸಭೆ ನಡೆಸಿ ವೀರ ಮರಣವಪ್ಪಿದ ವೀರ ಯೋಧರಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಆಶ್ರಮದ ಮುಖ್ಯಸ್ಥ ಆಪತ್ಭಾಂಧವ ಆಶಿಫ್ ಹೇಳಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು, ನಿರಂಜನ್ ಬಂಗೇರ ಹಾಗು ಆಶ್ರಮದಲ್ಲಿನ ಇತರರು ಪಾಲ್ಗೊಂಡಿದ್ದರು.
ವರದಿ: ಅದ್ದಿ ಬೊಳ್ಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.