ಜೆದ್ದಾ(www.vknews/in): ಕರೋನವೈರಸ್ ಕಾರಣದಿಂದಾಗಿ ಸೌದಿಯಲ್ಲಿ ವಿಧಿಸಿದ್ದ ನಿರ್ಬಂಧಗಳನ್ನು ಸಡಿಲಗೊಳಿಸಿದರ ಪರಿಣಾಮ ಮೂರು ತಿಂಗಳ ಮುಚ್ಚಿದ್ದ ಪವಿತ್ರ ನಗರವಾದ ಮಕ್ಕಾದ ಮಸೀದಿಗಳಲ್ಲಿ ಭಾನುವಾರ ಮುಂಜಾನೆ ಸಾವಿರಾರು ಆರಾಧಕರು ನಮಾಝ್ ನಿರ್ವಹಿಸಿದ್ದಾರೆ. ಕೊವಿಡ್ ಹರಡುವುದನ್ನು ತಡೆಯಲು ಕಟ್ಟುನಿಟ್ಟಾದ ಆರೋಗ್ಯ ಕ್ರಮಗಳ ನಡುವೆ ಮಕ್ಕಾದ ಮಸೀದಿಗಳಲ್ಲಿ ಫಜ್ರ್ ಪ್ರಾರ್ಥನೆ ಸಲ್ಲಿಸುವ ಫೋಟೋವನ್ನು ಮಕ್ಕಾದ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ವೈಯಕ್ತಿಕ ಪ್ರಾರ್ಥನಾ ರಗ್ಗುಗಳ ಬಳಕೆ, ಆರಾಧಕರ ನಡುವೆ 1.5 ಮೀಟರ್ ಅಂತರವಿಡುವುದು, ಮನೆಯಲ್ಲಿಯೇ ಅಂಗಶುದ್ಧಿ ಮಾಡಿ ಬರುವುದು ಮತ್ತು ಮಾಸ್ಕ್ ಧರಿಸುವುದು ಇವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳಲಾಗುತ್ತಿದೆ. ನಮಾಝ್ ನಿರ್ವಹಿಸಲು ಬರುವವರ ನಡುವೆ ಹ್ಯಾಂಡ್ಶೇಕ್ಗಳನ್ನು ನಿಶೇಧಿಸಲಾಗಿದೆ, ಪವಿತ್ರ ಕುರ್ಆನ್ ಓದಲು ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಅಪ್ಲಿಕೇಶನ್ಗಳನ್ನು ಬಳಸಲು ಅಥವಾ ಪವಿತ್ರ ಪುಸ್ತಕದ ಅವರ ವೈಯಕ್ತಿಕ ಪ್ರತಿಗಳನ್ನು ಬಳಸಲು ಸೂಚಿಸಲಾಗಿದೆ. ಮೆಕ್ಕಾದಲ್ಲಿನ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯವು ಮಕ್ಕಾ ನಗರದ ಸುಮಾರು 1,560 ಮಸೀದಿಗಳನ್ನು ಪುನಃ ತೆರೆಯುವ ಸಲುವಾಗಿ ಕ್ರಿಮಿನಾಶಕವನ್ನು ಸಿಂಪಡಿಸುವ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿತ್ತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.