ಶರ್ಜಿಲ್ ಉಸ್ಮಾನಿ ಬಿಡುಗಡೆಗೆ ವೆಲ್ಫೇರ್ ಪಾರ್ಟಿ ಆಗ್ರಹ

ಬೆಂಗಳೂರು (www.vknews.com) : ಫೆಟರ್ನಿಟಿ ಮೂವ್ಮೆಂಟ್ ನ ಅಮಾಯಕ ವಿದ್ಯಾರ್ಥಿ ನಾಯಕ ಶರ್ಜೀಲ್ ಉಸ್ಮಾನಿ ರವರ ಬಂಧನವನ್ನು ತೀವ್ರವಾಗಿ ಖಂಡಿಸಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಎಸ್. ಕ್ಯೂ.ಆರ್ ಇಲ್ಯಾಸ್, ತಕ್ಷಣ ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದಾರೆ.

ಅಮಾಯಕ ಶರ್ಜೀಲ್ ಉಸ್ಮಾನಿ ಬಂಧನವು ದೇಶದ ಜಾತ್ಯಾತೀತೆಯ ಮೇಲೆ ಮತ್ತೊಂದು ಕಳಂಕವಾಗಿದೆ. ಕೇಂದ್ರ ಸರ್ಕಾರ ಅಭಿಪ್ರಾಯ ಭೇದ ಹಾಗೂ ಮುಕ್ತ ವಿಚಾರಗಳ ಬೇಟೆ ನಡೆಸುತ್ತಿದೆ. ಆ ಮೂಲಕ CAA ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಮಾಯಕ ಜನರನ್ನು ಮತ್ತು ವಿದ್ಯಾರ್ಥಿ ಕಾರ್ಯಕರ್ತರನ್ನು ಬಂಧಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಡಾ. ಇಲ್ಯಾಸ್ ಆರೋಪಿಸಿದ್ದಾರೆ.

CAA ವಿರುದ್ಧ ಪ್ರತಿಭಟಿಸುವುದು ಜನರ ಮತ್ತು ವಿದ್ಯಾರ್ಥಿ ಕಾರ್ಯಕರ್ತರ ಪ್ರಜಾಪ್ರಭುತ್ವದ ಹಕ್ಕು ಎಂಬುದನ್ನು ಸರ್ಕಾರ ಮರೆಯಬಾರದು.

ಆದ್ದರಿಂದ ಶರ್ಜೀಲ್ ಉಸ್ಮಾನಿ ಸೇರಿದಂತೆ ಎಲ್ಲಾ ಅಮಾಯಕ ಕಾರ್ಯಕರ್ತರನ್ನು ಬೇಷರತ್ತಾಗಿ ಮತ್ತು ನಷ್ಟ ಪರಿಹಾರದೊಂದಿಗೆ ತಕ್ಷಣ ಬಿಡುಗಡೆ ಮಾಡಬೇಕೆಂದು ಇಲ್ಯಾಸ್ ಒತ್ತಾಯಿಸಿದ್ದಾರೆ.

ಅಧಿಕಾರ ದುರ್ಬಳಕೆ ಮಾಡಿಕೊಂಡ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳು ಮತ್ತವರ ರಾಜಕೀಯ ನೇತಾರರನ್ನು ಹೊಣೆಗಾರರನ್ನಾಗಿ ಮಾಡಬೇಕು ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಸರ್ಕಾರವನ್ನು ಇಲ್ಯಾಸ್ ಆಗ್ರಹಿಸಿದ್ದಾರೆ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...