ಭಾರಿ ಮಳೆಗೆ ತತ್ತರಿಸಿದ್ದ ಕೊಡಗು ಜಿಲ್ಲೆಯ‌ ಪ್ರದೇಶಗಳಲ್ಲಿ ಎಸ್ಸೆಸ್ಸೆಫ್ ಕೊಡಗು‌ ಹೆಲ್ಪ್ ಡೆಸ್ಕ್ ಮತ್ತು ಕ್ಯೂಟೀಂ ಕಾರ್ಯಚರಣೆ

ಸೋಮವಾರಪೇಟೆ (www.vknews.com) : ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಗ್ರಾಮ ಪಟ್ಟಣಗಳು ಜಲಾವೃತಗೊಂಡಿತ್ತಲ್ಲದೇ, ಭೂಕುಸಿತ, ಮನೆ ಹಾನಿಗಳು ಸಂಭವಿಸಿತ್ತು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಎಸ್ಸೆಸ್ಸಫ್ ಕೊಡಗು ಜಿಲ್ಲಾ ಸಮಿತಿ ಹೆಲ್ಪ್ ಡೆಸ್ಕ್ ಮತ್ತು ಕ್ಯೂಟೀಂ ಅಧೀನದಲ್ಲಿ ಜಿಲ್ಲೆಯ ಹಲವೆಡೆ‌ ಕಾರ್ಯಕರ್ತರು ಮಳೆ ಹಾನಿಗೆ‌ ತುತ್ತಾದ ಮನೆಗಳ ದುರಸ್ತಿ, ಅಪಾಯಕಾರಿ ಸ್ಥಳಗಳಿಂದ ನಿವಾಸಿಗಳನ್ನು ಸ್ಥಳಾಂತರಿಸುವುದು, ಜಲಾವೃತಗೊಂಡಿದ್ದ ಧಾರ್ಮಿಕ ಸ್ಥಳಗಳು, ವಿದ್ಯಾಸಂಸ್ಥೆಗಳು, ಮನೆಗಳ ಶುಚೀಕರಣ ಮುಂತಾದ ಕಾರ್ಯಚರಣೆ ನಡೆಸಿದರು.

ಜಿಲ್ಲೆಯಲ್ಲಿ ಭಾರಿ ಮಳೆಗೆ ಗಾಳಿಗೆ ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು, ಈ ಸಂದರ್ಭ ಎಸ್ಸೆಸ್ಸೆಫ್ ಅಯ್ಯಂಗೇರಿ ಯೂನಿಟ್ ವತಿಯಿಂದ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಮಳೆಗೆ ಜಲಾವೃತಗೊಂಡಿದ್ದ ಕೊಟ್ಟಮುಡಿಯ ಮರ್ಕಝ್ ವಿದ್ಯಾಸಂಸ್ಥೆಯ ಮಸೀದಿ , ಶಾಲಾ ಕಾಲೇಜು ಕಟ್ಟಡಗಳನ್ನು, ಮನೆಗಳನ್ನು ಎಸ್ಸೆಸ್ಸೆಫ್ ಕೊಟ್ಟಮುಡಿ ಶಾಖೆಯ ಕಾರ್ಯಕರ್ತರು ಸ್ವಚ್ಛಗೊಳಿಸಿದರು.

ಜಲಾವೃತಗೊಂಡಿದ ಚೆರಿಯಪರಂಬು ಮಸ್ಜಿದ್ , ಮದರಸವನ್ನು ಎಸ್ಸೆಸ್ಸಫ್ ಚೆರಿಯಪರಂಬು ಶಾಖೆಯ ಕಾರ್ಯಕರ್ತರು ಸ್ವಚ್ಛಗೊಳಿಸಿದರು. ಎಮ್ಮೆಮಾಡುವಿನ ಹಲವು ಮನೆಗಳು ಹಾನಿಗೊಳಗಾಗಿದ್ದು ಆ ಮನೆಗಳನ್ನು ಸರಿಪಡಿಸಲು ಎಸ್ಸೆಸ್ಸಫ್ ಎಮ್ಮೆಮ್ಮಾಡು ಶಾಖೆಯ ಕಾರ್ಯಕರ್ತರು ಧಾವಿಸಿದ್ದರು , ಹಲವು ಮನೆಗಳ ಮೇಲ್ಛಾವಣೆಗಳನ್ನು ಸರಿಪಡಿಸಿಕೊಟ್ಟರು. ಸಂಪೂರ್ಣ ಹಾನಿಗೊಳಗಾಗಿದ್ದ ಮನೆಯ ಶೀಟ್ ಗಳನ್ನು ಬದಲಾಯಿಸಿ ಹೊಸ ಶೀಟ್ ಗಳನ್ನು ಹಾಕಿ ಸರಿಪಡಿಸಿದರು. ಅದೇ ರೀತಿ ಹಾನಿಗೊಳಗಾಗಿದ್ದ ಮನೆಯವರಿಗೆ ನೀಡಿದರು. ಕೊಂಡಂಗೇರಿಯ ಜಲಾವೃತ ಪ್ರದೇಶದ ಮನೆಗಳನ್ನು ಎಸ್ಸೆಸ್ಸಫ್ ಕೊಂಡಂಗೇರಿ ಶಾಖೆಯ ಕಾರ್ಯಕರ್ತರು ಸ್ವಚ್ಛಗೊಳಿಸಿದರು

ಎಸ್ಸೆಸ್ಸಫ್ ಕೊಡಗು ಜಿಲ್ಲಾ ಸಮಿತಿ ಹೆಲ್ಪ್ ಡೆಸ್ಕ್ ಜಿಲ್ಲೆಯ ಹಲವು ಭಾಗಗಳಲ್ಲಿ ಕಾರ್ಯಕರ್ತರನ್ನು ಸಜ್ಜುಗೊಳಿಸಿದೆ. ಈಗಾಗಲೇ ಹಲವು ಪ್ರಳಯಭಾದಿತ ಪ್ರದೇಶಗಳಲ್ಲಿ ಕಾರ್ಯಚರಣೆಗಿಳಿದಿದ್ದಾರೆ. ಅದಲ್ಲದೇ ಕೊಡಗಿನ ಮೂರು ತಾಲೂಕಿನಲ್ಲಿಯು ಹೆಲ್ಪ್ ಲೈನ್ ಪ್ರಾರಂಭಿಸಿದ್ದು , ಸಂದಿಗ್ಧ ಪರಿಸ್ಥಿತಿಯಲ್ಲಿ ಧರ್ಮ ಜಾತಿ ಭೇದ ಭಾವ ವಿಲ್ಲದೆ ಎಲ್ಲರೂ ಸದುಪಯೋಗಪಡಿಸಿಕೊಳ್ಳುವಂತೆ ಎಸ್ಸೆಸ್ಸಫ್ ಜಿಲ್ಲಾ ಸಮಿತಿ ಕೋರಿದೆ.

Reported By Shibili kalkandoor

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...