(www.vknews.in)ಸುನ್ನಿ ಸೆಂಟರ್ ಪೆರ್ನೆ ಶಾಖೆಯ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
ಸುನ್ನೀ ಸೆಂಟರ್ ಪೆರ್ನೆ ಇದಕ್ಕೆ ಸ್ಥಳ ದಾನವನ್ನು ಮಾಡಿದಂತಹ ಜನಾಬ್ ಕೆ. ಅಬ್ದುಲ್ ರಶೀದ್ರವರು ಧ್ವಜಾರೋಹಣ ನೆರವೇರಿಸಿದರು.
ಮಾಜಿ ಎಸ್ ವೈ ಎಸ್ ರಾಜ್ಯಾಧ್ಯಕ್ಷ ರಾದ ಜಿ ಎಂ ಖಾಮಿಲ್ ಸಖಾಫಿಯವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ಹಾಗೂ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ವೀರ ಯೋಧರ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುವುದರೊಂದಿಗೆ ವೀರ ಮರಣವನ್ನು ಹೊಂದಿದವರಿಗಾಗಿ ದುಆ ಮಾಡಿದರು.
ಎಲ್ಲಾ ಮುನ್ನೆಚ್ಚರಿಕಾ ಕ್ರಮದೊಂದಿಗೆ ನಡೆದಂತಹ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪೆರ್ನೆ ಬದ್ರಿಯಾ ಜುಮಾ ಮಸ್ಜಿದ್ ನ ಅಧ್ಯಕ್ಷರಾದ ಅಬ್ದುಲ್ಲ ಶಾಫಿ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ, ಅಬೂಬಕ್ಕರ್ ಮೈರ ,ಲತೀಫ್ ಅಬಾಬೀಲ್, ಆಸಿಫ್ ಪೆರ್ನೆ ಮೊದಲಾದ SSF, SYS ಮತ್ತು SBS ಕಾರ್ಯಕರ್ತರು ಉಪಸ್ಥಿತರಿದ್ದರು.
ಸರಳವಾದಹಾ ಚೊಕ್ಕದಾದ ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ವಿತರಣೆ ಹಾಗೂ ಮೂರು ಸ್ವಲಾತಿನೊಂದಿಗೆ ಕೊನೆಗೊಳಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.