ಬದಿಯಡ್ಕ ಮಸೀದಿ ವಠಾರದಲ್ಲಿ 74ನೇ ಸ್ವಾತಂತ್ರ್ಯೋತ್ಸವ

ಅಮ್ಚಿನಡ್ಕ (www.vknews.com) : SYS, SSF ಅಮ್ಚಿನಡ್ಕ ಮತ್ತು ಸಿರಾಜುಲ್ ಹುದಾ ಮದರಸ ಬದಿಯಡ್ಕ ವತಿಯಿಂದ ಭಾರತದ ಸ್ವಾತಂತ್ರ್ಯ ದಿನವನ್ನು ಪ್ರತಿ ವರ್ಷವೂ ಆಚರಿಸಿಕೊಂಡು ಬರುತ್ತಿದ್ದು, ಈ ವರ್ಷವೂ ಸ್ವತಂತ್ರ ಭಾರತದ 74ನೇ ಸ್ವಾತಂತ್ರ್ಯೋತ್ಸವವನ್ನು ಬದಿಯಡ್ಕ ಮಸೀದಿ ವಠಾರದಲ್ಲಿ ಕೋವಿಡ್-19 ವ್ಯಾಪಕವಾಗಿ ತಾಂಡವಾಡುತ್ತಿರುವ ಕಾಲವಾದ್ದರಿಂದ ಸರಳವಾಗಿ ಆಚರಿಸಲಾಯಿತು.

ಬೆಳಿಗ್ಗೆ 7.30 ಘಂಟೆಗೆ ಸರಿಯಾಗಿ ಸ್ಥಳೀಯ ಇಮಾಮ್ ಅಬೂಬಕ್ಕರ್ ಮುಸ್ಲಿಯಾರ್ ರವರ ದುಆ ದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಮಂಗಳೂರು ಪಿ.ಎ ಕಾಲೆಜು ಇದರ ಕಛೇರಿ ನಿರ್ವಾಹಕರಾದ ಕಾದರ್ ಬದಿಯಡ್ಕ ರವರು ಮಾತನಾಡುತ್ತಾ ಎಲ್ಲರನ್ನೂ ಸ್ವಾಗತಿಸಿದರು. ಸಿರಾಜುಲ್ ಹುದಾ ಮದರಸ ಅಧ್ಯಕ್ಷರಾದ ಹಸೈನಾರ್ ಬದಿಯಡ್ಕ ರವರು ಧ್ವಜಾರೋಹಣಗೈದರು. ಶೇಕಮಲೆ ದರ್ಸ್ ವಿದ್ಯಾರ್ಥಿ ಅಬ್ದುರ್ರಶೀದ್ ಹಾಗೂ ಮದರಸ ವಿದ್ಯಾರ್ಥಿ ಮಶ್ಹೂದ್ ಸಂದೇಶ ಭಾಷಣವನ್ನು ಮಾಡಿ ನಂತರ ಮದರಸ ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಹಾಡುವುದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ಪ್ರಸ್ತುತ ಕಾರ್ಯಕ್ರಮದಲ್ಲಿ ಮದರಸ ವಿಧ್ಯಾರ್ಥಿಗಳು , ಮದರಸ ಕಮಿಟಿ ಮತ್ತು SSF, SYS ಅಮ್ಚಿನಡ್ಕ ಯುನಿಟ್ ಪದಾದಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...