(www.vknews.com) : ಚಿಕಿತ್ಸೆ ಫಲಕಾರಿಯಾಗದೆ ಹೈಲ್ಯಾಂಡ್ ಹಾಸ್ಪಿಟಲ್ ನಲ್ಲಿ ಮರಣ ಹೊಂದಿದ ವ್ಯಕ್ತಿಯ ಬಿಲ್ಲ್ ಮೊತ್ತ ಬಾಕಿ ಆಗಿದ್ದು, ಮಯ್ಯತ್ ಕೊಂಡು ಹೋಗಲು ಪರಿತಪಿಸುತ್ತಿದ್ದ ಕುಟುಂಬವೊಂದಕ್ಕೆ ಟೀಂ – ಬಿ ಹ್ಯೂಮನ್ ನೆರವಾಗಿ ಮಾನವೀಯತೆ ಮೆರೆದ ಘಟನೆ ನಿನ್ನೆ ನಡೆದಿದೆ.
ಮಂಗಳೂರು ಸಮೀಪದ ವ್ಯಕ್ತಿಯೊಬ್ಬರು ಹೈಲ್ಯಾಂಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಬಿಲ್ಲ್ ಮೊತ್ತವನ್ನು ಬರಿಸಲು ಆ ಅಸಾಹಯಕ ಕುಟುಂಬದಿಂದ ಆಗಲಿಲ್ಲ. ಇದೇ ಸಮಯಕ್ಕೆ ಚಿಕಿತ್ಸೆಗೆ ಸ್ಪಂಧಿಸದ ರೋಗಿಯೂ ಮರಣ ಹೊಂದಿದರು. ಈಗ ಕುಟುಂಬಕ್ಕೆ ದಿಕ್ಕೆ ತೋಚದಾಯಿತು. ಮಯ್ಯತ್ತ್ ಆಸ್ಪತ್ರೆಯಿಂದ ಬಿಡಿಗಡೆ ಮಾಡಲು ಬಿಲ್ಲ್ ಮೊತ್ತ ಪಾವತಿಸಬೇಕಿತ್ತು. ಆಸ್ಪತ್ರೆಯು ರಿಯಾಯತಿ ಎಲ್ಲವನ್ನೂ ಮಾಡಿದ್ದರೂ ಅಷ್ಟು ದೊಡ್ಡ ಮೊತ್ತ ಕಟ್ಟಲು ಅ ಸಂಸಾರದಲ್ಲಿ ಕಾಸು ಇರಲಿಲ್ಲ. ತಕ್ಷಣ ಯಾರೋ ಬೀ – ಹ್ಯೂಮನ್ ತಂಡಕ್ಕೆ ಕರೆ ಮಾಡಿ ವಿಷಯ ತಿಳಿಸಿದಾಗ ಆಗಲೇ ಆಸ್ಪತ್ರೆಯೆ ಕರೆ ಮಾಡಿದ ಬಿ ಹ್ಯೂಮನ್ ತಂಡದ ಆಸಿಫ್ ಡೀಲ್ಸ್ ಮಯ್ಯತ್ತನ್ನು ಕೊಂಡು ಹೋಗಲು ಅವಕಾಶ ಮಾಡಿ ಕೊಟ್ಟು ಪೂರ್ಣ ಹಣವನ್ನು ಪಾವತಿಸಿದರು.
ಕಷ್ಟ ಮತ್ತು ಸಂಕಷ್ಟ ಹೇಳಿದ ತಕ್ಷಣ ಅದಕ್ಕೆ ಸ್ಪಂಧಿಸಿದ ಟೀಂ ಬಿ ಹ್ಯೂಮನ್ ತಂಡದ ಪ್ರಯತ್ನಕ್ಕೆ ಅಲ್ಲಾಹನು ತಕ್ಕುದಾದ ಪ್ರತಿಫಲ ನೀಡಲಿ. ಅವರ ಸೇವೆ ಮತ್ತು ಕರುಣೆಯ ಕಾರಣಕ್ಕೆ ಈ ವಿಷಯ ಜನರಿಗೆ ತಲುಪಿ ಅವರಿಗೆ ಪ್ರಾರ್ಥನೆ ಸಿಗಲಿ ಎಂದು ಈ ವರದಿ ಬರೆಯಲಾಗಿದೆ.
ಹಕೀಂ ಸುರತ್ಕಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.