ದೆಹಲಿ(ವಿಶ್ವಕನ್ನಡಿಗ ನ್ಯೂಸ್): ಕೊರೋನವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬರುತ್ತಿದೆ.
ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಭಾರತ ದಾಖಲಿಸಿದ 58,390 ಕೋವಿಡ್ -19 ಸಾವುಗಳಲ್ಲಿ 87 ಶೇಕಡಾ 45 ವರ್ಷ ಮತ್ತು ಮೇಲ್ಪಟ್ಟವರಲ್ಲಿ ಸೇರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ತಿಳಿಸಿದೆ.
ವಯಸ್ಸು ಮತ್ತು ಲಿಂಗವನ್ನು ಆಧರಿಸಿ ಒಟ್ಟು ಕೋವಿಡ್ ಸಾವುಗಳ ವಿಶ್ಲೇಷಣೆಯನ್ನು ಸಚಿವಾಲಯ ನಡೆಸಿತು.
ಸಚಿವಾಲಯದ ಅಂಕಿಅಂಶಗಳ ಪ್ರಕಾರ ಮಧ್ಯವಯಸ್ಕ ಮತ್ತು ವೃದ್ಧರು ಹೆಚ್ಚಿನ ಅಪಾಯದಲ್ಲಿದ್ದಾರೆ. ಸಂಶೋಧನೆಗಳ ಪ್ರಕಾರ, ಕೋವಿಡ್ ಸಾವುಗಳಲ್ಲಿ ಶೇಕಡಾ 87 ರಷ್ಟು 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ದಾಖಲಾಗಿದ್ದರೆ, 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಒಟ್ಟು ಸಾವುಗಳಲ್ಲಿ ಶೇಕಡಾ 51 ರಷ್ಟಿದ್ದಾರೆ. 26 ವರ್ಷದೊಳಗಿನವರ ಸಾವು ಶೇಕಡಾ 2 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.