ಮಂಗಳೂರು(www.vknews.in): ಮಂಡಾಡಿಯ ಇಝ್ಝತುಲ್ ಇಸ್ಲಾಂ ಯತೀಮ್ ಖಾನದ ಪ್ರಾಯೊಜಕತ್ವದಲ್ಲಿ ವ್ಯಾಸಾಂಗ ಮಾಡುತ್ತಿರುವ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಯಿಷತುಲ್ ಮುಬಶ್ಶಿರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 575 ಅಂಕಗಳನ್ನು ಗಳಿಸುವ ಮೂಲಕ ಶೇಖಡಾ 92% ಸರಾಸರಿಯೊಂದಿಗೆ, ಬೆಳ್ತಂಗಡಿಯ ಸೈಂಟ್ ಥೆರೆಸಾ ಹೈಸ್ಕೂಲಿನ ವಿದ್ಯಾರ್ಥಿನಿ ಫೌಝಿಯಾ 500 ಅಂಕಗಳನ್ನು ಗಳಿಸುವ ಮೂಲಕ ಶೇಖಡಾ 83.33% ಸರಾಸರಿಯೊಂದಿಗೆ ಹಾಗೂ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅರ್ಫಾತ್ ಮದ್ದ 454 ಅಂಕಗಳನ್ನು ಗಳಿಸುವ ಮೂಲಕ ಶೇಖಡಾ 75.66% ಸರಾಸರಿಯೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆೆ.
ಮುಬಶ್ಶಿರ ಉಪ್ಪಿನಂಗಡಿಯ ಮರ್ಹೂಂ ಉಮ್ಮರ್ ಫಾರೂಕ್ ಹಾಗೂ ನಫೀಸ ದಂಪತಿಗಳ ಪುತ್ರಿಯಾಗಿದ್ದರೆ, ಫೌಝಿಯಾ ಅವರು ಬೆಳ್ತಂಗಡಿಯ ಮರ್ಹೂಂ ಹಮೀದ್ ಹಾಗೂ ಝುಲೈಕಾ ದಂಪತಿಗಳ ಸುಪುತ್ರಿಯಾಗಿದ್ದಾರೆ. ಅರ್ಫಾತ್ ಮದ್ದ ಅವರು ಮದ್ದ ಮರ್ಹೂಂ ಮುಸ್ತಫಾ ಹಾಗೂ ಆಮೀನಾ ದಂಪತಿಗಳ ಸುಪುತ್ರಿಯಾಗಿದ್ದಾಳೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.