ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಆಸ್ಪತ್ರೆಯಲ್ಲಿ ಐಸಿಯೂ ಖಾಲಿ ಇಲ್ಲ. ವೆಂಟಿಲೇಟರ್ ಇಲ್ಲ. ಅಷ್ಟೇ ಯಾಕೆ ರೂಂ ಕೂಡ ಇಲ್ಲದೆ ಇಬ್ಬರು ಹಿರಿಯ ರೋಗಿಗಳು ಆಂಬುಲೆಂನ್ಸ್ ನಲ್ಲಿ ಶ್ವಾಸ ಎಳೆಯುತ್ತಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನಿಂದ ವರದಿಯಾಗಿದೆ. ಈ ತಡ ರಾತ್ರಿಯವರೆಗೂ ರೋಗಿಯು ಆಂಬುಲೆಂನ್ಸ್ ನಲ್ಲೇ ಶ್ವಾಸ ಎಳೆಯಲು ಕಷ್ಟ ಪಡುತ್ತಿದ್ದರೂ ಅವರಿಗೆ ಯಾವುದೇ ಚಿಕಿತ್ಸೆ ಸಿಗುತ್ತಿಲ್ಲ. ವೆಲ್ ನೆಸ್ಸ್ ಹೆಲ್ಪ್ ಲೈನ್ ಮೂಲಕ ರೋಗಿಗಳಿಗೆ ಸಹಕರಿಸು ಪ್ರಯತ್ನ ಮಾಡಲಾಗುತ್ತಿದ್ದರೂ, ಯಾವುದೇ ಆಸ್ಪತ್ರೆಗಳು ಸ್ಪಂಧಿಸುತ್ತಿಲ್ಲ.
ವೆನ್ಲಾಕ್ ಸರಕಾರಿ ಆಸ್ಪತೆಯಲ್ಲಿ ಎ.ಜೆ ಹಾಸ್ಪಿಟಲ್ ಗೆ ದಾಖಲಿಸಲು ಲೆಟರ್ ನೀಡಲಾಗಿದೆ. ಎ.ಜೆ. ಆಸ್ಪತ್ರೆಯಲ್ಲಿ ರೋಗಿಗಳನ್ನು ಸ್ವೀಕರಿಸಲು ನಿರಾಕರಿಸಲಾಗಿದೆ. ರೋಗಿಗೆ ಕೊರೊನಾ ನೆಗೆಟಿವ್ ವರದಿ ಇದ್ದರೂ, ಬಿಪಿಎಲ್ ಕಾರ್ಡ್ ದಾರರಾಗಿ ಇರುವ ಕಾರಣ ಆಸ್ಪತ್ರೆಯು ಅವರಿಗೆ ಚಿಕಿತ್ಸೆ ನಿರಾಕರಿಸಿದೆ.
ಜಿಲ್ಲಾಧಿಕಾರಿಯವರಿಗೂ ಮಾಹಿತಿ ನೀಡಲಾಗಿದ್ದು ನಾಳೆ ಸ್ಪಂದಿಸುವ ಭರವಸೆ ಸಿಕ್ಕಿದೆ. ಈಗ ರೋಗಿಗಳ ಸ್ಥಿತಿಯಂತು ಚಿಂತಾಜನಕವಾಗಿದ್ದು ಆಂಬುಲೆಂನ್ಸ್ ನಲ್ಲಿ ಜೀವಣ್ಮರಣೆ ಸ್ಥಿತಿಯಲ್ಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.