ದರೋಡೆಕೋರರು ನಡೆಸಿರುವ ದುಷ್ಕೃತ್ಯ ಊಹೆಗೂ ನಿಲುಕದಷ್ಟು ಭಯಾನಕವಾಗಿದೆ : ಸುರೇಶ್ ರೈನಾ


ಪಂಜಾಬ್(ವಿಶ್ವ ಕನ್ನಡಿಗ ನ್ಯೂಸ್): ತನ್ನ ಮಾವ ಮತ್ತು ಅವರ ಮಗ ದುಷ್ಕರ್ಮಿಗಳ ಕೈಯ್ಯಿಂದ ಹತ್ಯೆಗೊಂಡ ಬಳಿಕ ಆಘಾತಗೊಂಡು ಐಪಿಎಲ್ ಪ್ರವಾಸ ಮೊಟಕುಗೊಳಿಸಿ ಹಿಂತಿರುಗಿ ಬಂದಿರುವ ಸುರೇಶ್ ರೈನಾ ಆರೋಪಿಗಳನ್ನು ಶೀಘ್ರವೇ ಹುಡುಕಿ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ರವರಲ್ಲಿ ಮನವಿ ಮಾಡಿದ್ದಾರೆ.ನನ್ನ ಮಾವನ ಮನೆಗೆ ಆಕ್ರಮಿಸಿರುವ ದರೋಡೆಕೋರರು ನಡೆಸಿರುವ ದುಷ್ಕೃತ್ಯ ಊಹೆಗೂ ನಿಲುಕದಷ್ಟು ಭಯಾನಕವಾಗಿದೆ.ಆಗಸ್ಟ್ 20 ರಂದು ನಡೆದ ಘಟನೆಯಲ್ಲಿ ಮಾವನನ್ನು ಕೊಂದು ಹಾಕಲಾಗಿದೆ,ಅತ್ತೆ ಹಾಗು ಇಬ್ಬರು ಮಕ್ಕಳು ತೀವ್ರ ಇರಿತಕ್ಕೊಳಗಾಗಿದ್ದು,ಅವರ ಓರ್ವ ಮಗ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯುಗೊಂಡಿದ್ದಾನೆ.ಇದುವರೆಗೂ ಕೃತ್ಯ ಯಾರು ನಡೆಸಿದ್ದೆಂದು ಕಂಡು ಬಂದಿಲ್ಲ,ಯಾವ ಕಾರಣಕ್ಕೂ ಅವರನ್ನು ಬಿಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...