ನವದೆಹಲಿ(ವಿಶ್ವ ಕನ್ನಡಿಗ ನ್ಯೂಸ್): 1996 ರ ಬಳಿಕ ಇದೇ ಮೊದಲ ಬಾರಿಗೆ ಜಿಡಿಪಿ ಯಲ್ಲಿ ಭಾರೀ ಕುಸಿತ ಕಂಡಿರುವ ಭಾರತದ ಅರ್ಥವ್ಯವಸ್ಥೆ ಸರಕಾರಕ್ಕೆ ಸವಾಲಾಗಿ ಪರಿಗಮಿಸಿದೆ.ಕೋವಿಡ್ ಬಳಿಕ ಅನೇಕ ಬಲಿಷ್ಠ ದೇಶಗಳ ಅರ್ಥ ವ್ಯವಸ್ಥೆಗೆ ಹಿನ್ನಡೆಯಾಗಿದ್ದರೂ ಭಾರತದಷ್ಟು ಕುಸಿತ ಜಗತ್ತಿನ ಯಾವ ದೇಶವೂ ಅನುಭವಿಸಿಲ್ಲ ಎನ್ನುವುದು ಎಚ್ಚರಿಕೆಯಾಗಿದೆ.ಕೋವಿಡ್ ನ ನಡುವೆಯೂ ಲಾಕ್ ಡೌನ್ ತೆರವುಗೊಂಡಿದ್ದು ನಿಧಾನಕ್ಕೆ ವ್ಯಾಪಾರಗಳು ಮರಳಿ ಹಳಿಗೆ ಬರುತ್ತಿವೆಯಾದರೂ ಅಸಂಘಟಿತ ವಲಯದಲ್ಲಿನ ಚೇತರಿಕೆ ಬಹುದೊಡ್ಡ ಸವಾಲಾಗಿದೆ.ಇದೆಲ್ಲದರ ಜತೆಗೆ ದಿನೇ ದಿನೇ ಕೋವಿಡ್ ನ ಸಂಖ್ಯೆಯಲ್ಲಿನ ಏರಿಕೆ ಕೂಡ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಹಣಕಾಸು ಸೇವಾ ವಿಭಾಗದಲ್ಲಿ 5.5 ಶೇ ಕುಸಿತ,ವ್ಯಾಪಾರ-ಹೋಟೆಲ್-ಸಾರಿಗೆ ಸಂಪರ್ಕ ವಿಭಾಗಗಳಲ್ಲಿ ಶೇ 47 ಕುಸಿತ,ಉತ್ಪಾದನಾ ರಂಗದಲ್ಲಿ ಶೇ 39.3 ಕುಸಿತ,ನಿರ್ಮಾಣ ಉದ್ಯಮದಲ್ಲಿ ಶೇ 50.3 ಕುಸಿತ,ಗಣಿಗಾರಿಕೆಯಲ್ಲಿ ಶೇ.23.3 ಕುಸಿತ,ವಿದ್ಯುತ್ ಹಾಗು ಗ್ಯಾಸ್ ಬಳಕೆಯಲ್ಲಿ ಶೇ 7 ಕುಸಿತ,ಕೃಷಿಯಲ್ಲಿ ಮಾತ್ರ 3.4 ಶೇ ದಲ್ಲಿ ಮುಂದುವರಿಯುತ್ತಿದ್ದು ಒಂದಿಷ್ಟು ನಿರಾಳತೆಯನ್ನು ತಂದಿಟ್ಟಿದೆ.ಒಟ್ಟಾರೆ ಜಿಡಿಪಿಯಲ್ಲಿ ಶೇ 23.9 ರಷ್ಟು ಕುಸಿತ ಕಂಡು ಬಂದಿದೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.