ದೆಹಲಿ(ವಿಶ್ವ ಕನ್ನಡಿಗ ನ್ಯೂಸ್):ಟ್ವಿಟರ್ ಖಾತೆ ಹೊಂದಿದ್ದ ಪ್ರಧಾನಿ ಮೋದಿಯವರ ವೆಬ್ ಸೈಟ್ ಹಾಗು ಆಪ್ ಅನ್ನು ಹ್ಯಾಕ್ ಗೊಳಿಸಲಾಗಿದೆ ಎಂದು ಟ್ವಿಟರ್ ಧೃಢ ಪಡಿಸಿದೆ.ಈ ಸಂಬಂಧ ಕೂಡಲೇ ತನಿಖೆ ಆರಂಭಿಸುವುದಾಗಿ ಖಾತ್ರಿ ಪಡಿಸಿದೆ.ಹ್ಯಾಕರ್ಸ್ ಗಳು ಟ್ವಿಟರ್ ಅನ್ನು ಹ್ಯಾಕ್ ಮಾಡಿದ ಬಳಿಕ ಪ್ರಧಾನಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ಕ್ರಿಪ್ಟೋ ಕರೆನ್ಸಿ ಮೂಲಕ ಸಹಾಯ ನೀಡಬೇಕೆಂದು ಕೋರುವ ಸಂದೇಶ ಕಳಿಸಿದ್ದಾರೆ.2011 ರಲ್ಲಿ ಆರಂಭಿಸಿದ್ದ narendramodi_in ಅಕೌಂಟ್ ನಲ್ಲಿ 25 ಲಕ್ಷ ಫಾಲೋವರ್ ಗಳಿದ್ದು 37000 ಟ್ವೀಟ್ ಗಳನ್ನು ಮಾಡಲಾಗಿದೆ. ಹ್ಯಾಕ್ ತಮ್ಮ ಗಮನಕ್ಕೆ ಬಂದಿದ್ದು ಸುರಕ್ಷತೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಟ್ವಿಟರ್ ವಕ್ತಾರರು ಹೇಳಿಕೆ ನೀಡಿದ್ದಾರೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.