ಜೆದ್ದಾ(www.vknews.in): ಸೌದಿ ಅರೇಬಿಯಾದಿಂದ ವಿದೇಶಿ ಪ್ರಜೆಗಳಿಗೆ ಮಾತ್ರ ತಂತಮ್ಮ ರಾಷ್ಟ್ರಗಳಿಗೆ ಪ್ರಯಾಣಿಸಲು ಅವಕಾಶ ನೀಡಿ ಸೌದಿ ವಿಮಾನಯಾನ ಪ್ರಾಧಿಕಾರವು ಸುತ್ತೋಲೆ ಹೊರಡಿಸಿದೆ. ಕೊವಿಡ್ ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೌದಿಯಲ್ಲಿ ನೆಲೆಸಿರುವ ವಿದೇಶಿಗಳಿಗೆ ಸೌದಿಯಿಂದ ಹೊರಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದ್ದು, ಆದರೆ ವಿದೇಶಗಳಿಗೆ ಸೌದಿ ಪ್ರವೇಶವನ್ನು ನಿರಾಕರಿಸಿದೆ.
ಯುರೋಪ್ ರಾಷ್ಟ್ರಗಳಲ್ಲಿ ರೂಪಾಂತರಿತ ಕೊವಿಡ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದವಾರ ಸೌದಿ ಅರೇಬಿಯಾ ತನ್ನ ಎಲ್ಲಾ ವಾಯು ಹಾಗೂ ಸಮುದ್ರ ಮಾರ್ಗಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.