ಇಂಝಾಮ್ ಬಜ್ಪೆ
(www.vknews.com) : ಒಂದು ಪತ್ರಿಕಾ ವರದಿ ಓದಿದ್ದೆ, ಆ ವರದಿಯಲ್ಲಿ ಒರ್ವ ವಿಜ್ಞಾನಿ ಹೇಳುವ ಪ್ರಕಾರ ಪ್ರೀತಿಗೂ ಹ್ರದಯಕ್ಕೂ ಯಾವುದೇ ಸಂಬಧವಿಲ್ಲ, ಪ್ರೀತಿ ಹುಟ್ಟುವುದು ಮೆದುಳಿನಿಂದ. ಅಷ್ಟಕ್ಕೂ ಮೆದುಳಿನ ಶಕ್ತಿ ಕಳೆದುಕೊಂಡಂತವರು ಯಾರನ್ನಾದರೂ ಧ್ವೇಷಿಸುವುದನ್ನು ಕಂಡಿದ್ದೀರ…?
ಅದೆಂಥಾ ಶಕ್ತಿ ಆ ಮೆದುಳಿಗೆ. ಇಡೀ ದೇಹ, ನಮ್ಮ ಚಲನ, ಮಾತು, ದ್ರಷ್ಠಿ ಎಲ್ಲವನ್ನೂ ಮನಸ್ಥಿಯಿಂದ ನಿರ್ಧರಿಸಬಹುದಲ್ಲವೇ…! ಆ ಮನಸ್ಥಿತಿಯೇ ನಮ್ಮ ಮುಗುಳುನಗೆಯನ್ನು ಕಿತ್ತುಕೊಂಡಿದೆ ಎಂದರೆ ತಪ್ಪಾಗಲಾರದು.
ಅದೆಲ್ಲಿರುತ್ತೋ ಆ ಮುಗುಳ್ನಗು, ಮೊಬೈಲ್’ನಿಂದ ಸೆಲ್ಫೀ ತೆಗೆಯುವುದಕ್ಕೆ ಮುಂದಿನ ಕ್ಯಾಮರ ತೆರೆದರೆ ಸಾಕು ನಮ್ಮ ಹಾವಾ-ಭಾವ ಎಲ್ಲವೂ ಸ್ಪುಟಿತವಾಗಿ ಎಚ್ಚರಗೊಳ್ಳುತ್ತೆ. ಆದರೆ ಅದು ಕೇವಲ ತಾತ್ಕಾಲಿಕ ಮುಗುಳ್ನಗು, ಅದೇ ಒಬ್ಬ ಹೊಸ ವ್ಯಕ್ತಿ ನಮ್ಮ ಮುಂದೆ ಸಿಕ್ಕಿದರೆ ಸಾಕು ಹಾಳಾದ್ದು ಆ ಮುಗುಳ್ನಗು ಎಲ್ಲಿರುತ್ತೋ ಗೊತ್ತಿಲ್ಲ, ಮುಖದ ಭಾವನೆಯೇ ಒಂಥರಾ ಆ ಸಂದರ್ಭಕ್ಕೆ ಮತ್ತು ಹವಾಮಾನಕ್ಕೆ ಹೊಂದಿಕೊಂಡಿರುತ್ತೆ. ಇದೆಲ್ಲವೂ ಮನಸ್ಥಿತಿಯ ಆಟ.
There’s a magic in state of mind. ಎಷ್ಟೋ ಜನ ತಮ್ಮ ನಗುಮುಖವನ್ನು ಕೇವಲ ಕ್ಯಾಮರಾಕ್ಕೆ ಸೀಮಿತವಾಗಿಸಿರುತ್ತಾರೆ. ಕ್ಯಾಮರಾದ ಮುಂದೆ Smile Please ಅಂಥ ಹೇಳುವ ತನಕ ನಗುವುದನ್ನೇ ಮರೆತಿರುತ್ತಾರೆ. ಇತ್ತೀಚೆಗೆ ಈ Standard ಮತ್ತು Branded ಲೈಫ್ ಬಂದ ನಂತರ ಜನರ ಮುಖದ ಭಾವನೆ ಸಾಧಾರಣವಾಗಿ Rough & Tough ರೀತಿಯಲ್ಲಿರುತ್ತೆ. ಆರೋಗ್ಯದ ದ್ರಷ್ಠಿಯಲ್ಲಿ ನೋಡಿದರೆ ನಗುಮುಖ ಇಲ್ಲದವರು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗಿರುತ್ತಾರೆ. ಹಲವಾರು ರೀತಿಯ ಯೋಚನೆ ಬರುವುದೂ ಕೂಡ ಈ ನಗುವನ್ನು ಮರೆತವರಿಗೆ.
ನಮ್ಮ ಮನಸ್ಥಿತಿಯನ್ನು ನಾವು ಮೊದಲು ಬದಲಾಯಿಸಬೇಕು. ನಮಗೋಸ್ಕರ ನಾವು ಬದುಕನ್ನು ರೂಪಿಸಿಕೊಳ್ಳಬೇಕು ಆಗಲೇ ನಾವು ಇತರರಿಗೆ ಸಹಕಾರಿಯಾಗಲು ಸಾಧ್ಯ, (ನಮಗೋಸ್ಕರ ಅಂದರೆ ಸ್ವಾರ್ಥಿಯಾಗುವುದೆಂದಲ್ಲ). ಕ್ಯಾಮರಾದ ಹಿಂದೆ ಲೈಫು ಬೇಜಾರಾಗಿರಬಾರದು. ಕ್ಯಾಮರಾ ಇಲ್ಲದ ಸಮಯದಲ್ಲಿ ನಾವು ಹೆಚ್ಚು ಖುಷಿಯಾಗಿರುವುದಕ್ಕೆ ಪ್ರಯತ್ನ ಪಡಬೇಕು.
ಹಲವಾರು ಪಾರ್ಕ್’ಗಳಲ್ಲಿ laughter yoga ಅನ್ನೋ ಒಂದು ತರಬೇತಿ ಕೂಡ ನಡೆಯುತ್ತೆ. ಮರೆತು ಹೋದ ಒಂದನ್ನು ಮರುಕಳಿಸುವುದಕ್ಕಲ್ಲವೇ ಈ ರೀತಿಯ ಒಂದು ಯೋಗ..!?
ಕೊನೆಯಲ್ಲಿ Smile Please…. 😊
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.