ಪುತ್ತೂರು,ಮಾ 04(ವಿಶ್ವಕನ್ನಡಿಗ ನ್ಯೂಸ್): ಅರ್ಲಪದವು ಸಮೀಪ ಕಡಮ್ಮಾಜೆಯಲ್ಲಿ ಕೋಳಿ ತ್ಯಾಜ್ಯ ವಿಲೇವಾರಿ ಗುಂಡಿ ನಿರ್ಮಾಣದ ವೇಳೆ ಮಣ್ಣಿನಡಿಗೆ ಸಿಲುಕಿ ಎಸ್ಡಿಪಿಐಯ ಸಕ್ರಿಯ ಕಾರ್ಯಕರ್ತ ಮತ್ತು ದಲಿತ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿರುವ ಬಾಬು ಮತ್ತು ಇನ್ನೋರ್ವ ಕಾರ್ಮಿಕ ರವಿ ಎಂಬವರು ಮೃತ ಹೊಂದಿದ್ದು,ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ತೀವೃ ಸಂತಾಪ ವ್ಯಕ್ತಪಡಿಸುತ್ತದೆ.
ಕಡಮ್ಮಾಜೆಯ ಉದ್ಯಮಿಯೋರ್ವರಿಗೆ ಸೇರಿದ ಕೋಳಿ ಫಾರ್ಮ್ ನ ತ್ಯಾಜ್ಯ ವಿಲೇವಾರಿಗೆ ಸಂಬಂಧಪಟ್ಟಂತೆ ಜೆಸಿಬಿ ಮೂಲಕ ಹೊಂಡ ತೆಗೆಯುವ ಕೆಲಸ ನಡೆಯುತ್ತಿರುವಾಗ ಆಕಸ್ಮಿಕವಾಗಿ ಮಣ್ಣಿನಡಿಗೆ ಬಿದ್ದು ಇಬ್ಬರೂ ಕಾರ್ಮಿಕರು ನಮ್ಮನ್ನು ಅಗಲಿದ್ದಾರೆ.ಇವರ ಕುಟುಂಬಕ್ಕೆ ಮತ್ತು ಗೆಳೆಯರಿಗೆ ಅಗಲುವಿಕೆಯ ನೋವನ್ನು ತಡೆಯುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ.ಅದೇ ರೀತಿ ಸಾದ್ಯವಿರುವ ಎಲ್ಲಾ ಕಾರ್ಯಕರ್ತರು ಮೃತರ ಅಂತಿಮ ದರ್ಶನವನ್ನು ಪಡೆಯಬೇಕೆಂದು ಈ ಮೂಲಕ ತಿಳಿಯಪಡಿಸುತ್ತಿದ್ದೇನೆ.
ಅಬೂಬಕ್ಕರ್ ಸಿದ್ದೀಕ್ ಕೆ.ಎ (ಅಧ್ಯಕ್ಷರು SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ )
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.